ಬೆಂಗಳೂರು: ರಾಜ್ಯಕ್ಕೆ ಸುಮಾರು 74 ಮೆಟ್ರಿಕ್ ಟನ್ ಆಕ್ಸಿಜನ್ ಇನ್ನು 2-3 ದಿನಗಳಲ್ಲಿ ಬರಲಿದೆ – ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.

ಹೆಚ್ಚಿನ ಆಕ್ಸಿಜನ್ ಸರಬರಾಜು ನಿಟ್ಟಿನಲ್ಲಿ ನಮ್ಮ ಮನವಿಗೆ ಶೀಘ್ರವಾಗಿ ಸ್ಪಂದಿಸಿರುವ ಕೇಂದ್ರ ಸರ್ಕಾರ ತಲಾ 20 ಟನ್ ಸಾಮರ್ಥ್ಯದ 2 ದ್ರವ ವೈದ್ಯಕೀಯ ಆಕ್ಸಿಜನ್ ಕಂಟೇನರ್ ಗಳನ್ನು ಬಹ್ರೇನ್ನಿಂದ ರಾಜ್ಯಕ್ಕೆ ಕಳುಹಿಸಿದೆ. ಜೊತೆಗೆ 2 ಹೆಚ್ಚುವರಿ ಕಂಟೇನರ್ಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಮೂಲಕ ಕಳುಹಿಸಲು ಒಪ್ಪಿದೆ.

ರಾಜ್ಯಕ್ಕೆ ದ್ರವ ಆಕ್ಸಿಜನ್ ತರಲು ರಾಜ್ಯಸರ್ಕಾರ 5 ಟ್ಯಾಂಕರ್ಗಳನ್ನು ವಾಯುಪಡೆ ವಿಮಾನಗಳ ಮೂಲಕ ಒರಿಸ್ಸಾಗೆ ಕಳುಹಿಸಿದ್ದು, ಸುಮಾರು 74 ಮೆಟ್ರಿಕ್ ಟನ್ ಆಕ್ಸಿಜನ್ ಇನ್ನು 2-3 ದಿನಗಳಲ್ಲಿ ರಾಜ್ಯಕ್ಕೆ ಬರಲಿದೆ. ಸಾಂಕ್ರಾಮಿಕ ನಿರ್ವಹಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
