ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಹಿನ್ನೆಲೆ, ಸಿ.ಟಿ.ರವಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ತಮ್ಮ ರಾಜೀನಾಮೆ ಕುರಿತಾಗಿ ಸಿ.ಟಿ.ರವಿ ಮಾತನಾಡಿದ್ದರು. ನಾನು ಸಾಮಾನ್ಯ ಕಾರ್ಯಕರ್ತನಾಗಿಯೇ ಕೆಲಸ ಮಾಡಿಕೊಂಡು ಬಂದಿರುವುದರಿಂದ ನನಗೆ ಯಾವುದೇ ಗೊಂದಲಗಳಿಲ್ಲ. ಅಧಿಕಾರವೆಂಬುದು ಒಂದು ಸಾಧನ. ಅಧಿಕಾರವೇ ಜೀವನದ ಅಂತಿಮ ಗುರಿಯಲ್ಲ. ಜೀವನದ ಅಂತಿಮ ಗುರಿ, ತಾಯಿ ಭಾರತಿ ಎಲ್ಲಾ ಕ್ಷೇತ್ರದಲ್ಲೂ ಸಶಕ್ತವಾಗಬೇಕು. ದೇಶದೊಳಗಿರುವ ದೌರ್ಬಲ್ಯಗಳು ಕೊನೆಯಾಗಬೇಕು. ದೋಷ ಮುಕ್ತವಾಗಬೇಕು ಎಂದಿದ್ದರು. ಸಿ.ಟಿ.ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಾಗ ಪಕ್ಷ ಬಯಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು.
