ಬೆಂಗಳೂರು: ರಾಜಭವನ ಚಲೋ ಪ್ರತಿಭಟನೆ ಮುಖ್ಯಾಂಶಗಳು.

- ಕಳೆದ ರಾತ್ರಿಯಿಂದಲೇ ರಾಜ್ಯದ ವಿವಿಧ ಪ್ರದೇಶಗಳಿಂದ ಬೆಂಗಳೂರಿಗೆ ಬರುತ್ತಿದ್ದ ರೈತರು, ಕಾಂಗ್ರೆಸ್ ಕಾರ್ಯಕರ್ತರನ್ನು ಹೆದ್ದಾರಿಯಲ್ಲೇ ತಡೆಹಿಡಿದ ಪೊಲೀಸರು.
- ಈ ವಿಚಾರ ತಿಳಿದು ಆಕ್ರೋಶಗೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಪೊಲೀಸರು ಎಲ್ಲಿ ತಡೆಯುತ್ತಾರೋ ಅಲ್ಲೇ ರಸ್ತೆಯಲ್ಲೇ ಪ್ರತಿಭಟಿಸುವಂತೆ, ರಸ್ತೆ ಬಂದ್ ಮಾಡುವಂತೆ ಪ್ರತಿಭಟನಾಕಾರರಿಗೆ ಕರೆ.
- ಪೊಲೀಸರು ಅಡ್ಡಗಟ್ಟಿದರೂ ಲೆಕ್ಕಿಸದೇ ತಮ್ಮ ಹಕ್ಕಿನ ಹೋರಾಟದಲ್ಲಿ ಭಾಗವಹಿಸಲು ಆಗಮಿಸುವಲ್ಲಿ ಸಾವಿರಾರು ರೈತರು ಯಶಸ್ವಿ.
- ಬೆಳಗ್ಗೆ 10 ಗಂಟೆ ಹೊತ್ತಿಗೆ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಬಳಿ ಜಮಾವಣೆಗೊಂಡ ಅಸಂಖ್ಯ ರೈತರು, ಕಾಂಗ್ರೆಸ್ ಕಾರ್ಯಕರ್ತರು. ಎಲ್ಲೆಲ್ಲೂ ಹಾರಾಡಿದ ಕಾಂಗ್ರೆಸ್ ಧ್ವಜ.
- ನೂರಾರು ಟ್ರಾಕ್ಟರ್ ಗಳಲ್ಲಿಯೂ ಆಗಮಿಸಿದ ರೈತರು. ಡೊಳ್ಳು ಕುಣಿತ ಸೇರಿದಂತೆ ಜಾನಪದ ತಂಡಗಳಿಂದ ಪ್ರತಿಭಟನೆಗೆ ಮೆರಗು.
- ಸಾವಿರಾರು ಸಂಖ್ಯೆಯಲ್ಲಿ ನೆರೆದ ರೈತರೊಂದಿಗೆ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಹೆಚ್.ಕೆ ಪಾಟೀಲ್ ಹಾಗೂ ಇತರ ನಾಯಕರು ಸ್ವಾತಂತ್ರ್ಯ ಉದ್ಯಾನವನಕ್ಕೆ ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಮೂಲಕ ಆಗಮನ.
- ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ಸಭೆ. ಢಕ್ಕೆ ಬಾರಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಡಿ.ಕೆ. ಶಿವಕುಮಾರ್. ನಂತರ ಅವರು, ಸಿದ್ದರಾಮಯ್ಯ, ಪರಮೇಶ್ವರ್ ಮತ್ತಿತರ ನಾಯಕರ ಭಾಷಣ.
- ಮೂರು ರೈತವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರ, ನಾಯಕರ ವಿರುದ್ಧ ವಾಗ್ಪ್ರಹಾರ. ರೈತರ ಚಳವಳಿ ಹತ್ತಿಕ್ಕಲು ಯತ್ನಿಸಿದ್ದಕ್ಕೆ ತೀವ್ರ ತರಾಟೆ.
- ನಂತರ ರಾಜಭವನಕ್ಕೆ ಮುತ್ತಿಗೆ ಹಾಕಲು ಸಾವಿರಾರು ಬೆಂಬಲಿಗರ ಜತೆ ಹೊರಟ ನಾಯಕರು.
- ಮಾರ್ಗ ಮಧ್ಯದಲ್ಲಿ ಶಿವಕುಮಾರ್, ಸಿದ್ದರಾಮಯ್ಯ, ಎಸ್.ಆರ್. ಪಾಟೀಲ್, ಸಲೀಂ ಅಹಮದ್ ಮತ್ತುತರ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು.
- ಅನೇಕರನ್ನು ವಶಕ್ಕೆ ಪಡೆಯುವಾಗ ಕಾರ್ಯಕರ್ತರ ಮೇಲೆ ಪೊಲೀಸರ ಬಲಪ್ರಯೋಗ.
- ಪೊಲೀಸರ ಎಳೆದಾಟದಿಂದ ಅಸ್ವಸ್ಥರಾಗಿ ಕೆಳಗೆ ಬಿದ್ದ ಶಾಸಕಿ ಅಂಜಲಿ ನಿಂಬಾಳ್ಕರ್.
- ಪೊಲೀಸರ ಅನಗತ್ಯ ಬಲಪ್ರಯೋಗಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕಿ ಸೌಮ್ಯಾರೆಡ್ಡಿ. ವಾದ-ವಾಗ್ವಾದ. ತಳ್ಳಾಟ-ನೂಕಾಟಕ್ಕೆ ಆಯತಪ್ಪಿದ ಮಹಿಳಾ ಕಾರ್ಯಕರ್ತರು.
- ಮುಖಂಡರಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ. ಪಾಟೀಲ್, ಡಾ. ಜಿ. ಪರಮೇಶ್ವರ ಅವರನ್ನೊಳಗೊಂಡ ನಿಯೋಗದಿಂದ ರಾಜ್ಯಪಾಲರ ಭೇಟಿ. ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ.

ವರದಿ: ಸಿಸಿಲ್ ಸೋಮನ್

