ಬೆಂಗಳೂರು: ಮಾಜಿ ಶಾಸಕರು ಶ್ರೀ ಗೋಪಾಲಕೃಷ್ಣ ಬೇಳೂರು ಇಂದು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಭೇಟಿ.

ಶ್ರೀ ಗೋಪಾಲಕೃಷ್ಣ ಬೇಳೂರು, ಮಾನ್ಯ ಮಾಜಿ ಶಾಸಕರು, ಸಾಗರ ವಿಧಾನಸಭಾ ಕ್ಷೇತ್ರ ಹಾಗೂ ಕೆ.ಪಿ.ಸಿ.ಸಿ ವಕ್ತಾರರು ದಿನಾಂಕ13.08.2021ರಂದು ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ರವರು, ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ರವರನ್ನು ಶಕ್ತಿ ಭವನ, ಬೆಂಗಳೂರು ಇಲ್ಲಿ ಭೇಟಿಯಾಗಿ ಸಾಗರ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಅಂರ್ತಜಾಲದ ಸಮಸ್ಯೆಯಿದ್ದು, ಅದರಲ್ಲೂ ಮಲೆನಾಡಿನ ದಟ್ಟ ಕಾಡಿನ ನಡುವೆ ಇರುವ ಗ್ರಾಮಗಳಾದ ಕರೂರು, ಬಾರಂಗಿ, ಸಿಂಗದೂರು ಇನ್ನಿತರೆ ಗ್ರಾಮಗಳಲ್ಲಿ ಅಂರ್ತಜಾಲದ ಸಮಸ್ಯೆಯಿದ್ದು, ಇದರಿಂದಾಗಿ ಗ್ರಾಮೀಣ ಭಾಗದ ಮಕ್ಕಳು ಆನ್ ಲೈನ್ ಮುಖಾಂತರ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ವಂಚಿತರಾಗುತ್ತಿದ್ದಾರೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ಮಾರಕವಾಗದಂತೆ ತಡೆಯಲು ಹಾಗೂ ಭವಿಷ್ಯದ ಹಿತದೃಷ್ಠಿಯಿಂದ ಅಂತರ್ಜಾಲದ ಸಮಸ್ಯೆಯನ್ನು ಕೂಡಲೇ ಬಗೆ ಹರಿಸುವಂತೆ ಹಾಗೂ ತುಮರಿ ಮತ್ತು ಬ್ಯಾಕೋಡಿನ ಗ್ರಾಮದ ಸುತ್ತಮುತ್ತ ಕೆಲ ತಿಂಗಳ ಹಿಂದೆ ಕೊಲೆ, ಕೊಲೆ ಪ್ರಯತ್ನ ಇನ್ನಿತರೆ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆದ ಹಿನ್ನಲೆಯಲ್ಲಿ,ಈ ಭಾಗದ ಜನರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ರಕ್ಷಣೆಯನ್ನು ಒದಗಿಸುವಂತಾಗಲೂ ಆರಕ್ಷಕ ಉಪ ಠಾಣೆಯನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಮಾನ್ಯ ಮಾಜಿ ಶಾಸಕರ ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳು ತಾಳ್ಮೆಯಿಂದ ಆಲಸಿ, ಸಕರಾತ್ಮಕವಾಗಿ ಸ್ಪಂಧಿಸಿ ಸದರಿ ವಿಷಯಗಳ ಬಗ್ಗೆ ಕೂಡಲೇ ಪತ್ರವನ್ನು ಬರೆದು ಸಮಸ್ಯೆಯನ್ನು ಬಗೆ ಹರಿಸುವಂತೆ ಶ್ರೀ ಮುಂಜುನಾಥ್ ಪ್ರಸಾದ್, ಭಾ.ಆ.ಸೇ, ಮಾನ್ಯ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳು ಇವರಿಗೆ ಸೂಚಿಸಿದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್- ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
