ಸಾಗರ: ಬಿಜೆಪಿ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಕೋವಿಡ್ 19 ಕೊರೊನಾ ನೆಪದಲ್ಲಿ ಅಡ್ಡಗಾಲು ಹಾಕುತ್ತಿರುವುದು ಎಷ್ಟು ಸರಿ ? – ಸಾಗರ ಎನ್.ಎಸ್.ಯು.ಐ ಉಪಾಧ್ಯಕ್ಷ ಶ್ರೀ ಚಿಂಟು ಸಾಗರ್ ಗುಡುಗಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಪ್ರತಿ ಮನೆ ಮನೆಯಲ್ಲಿ ಆಚರಣೆ ಮಾಡುತ್ತಿದ್ದ ಈ ಗಣೇಶ ಹಬ್ಬ ಇದೇ ಹಬ್ಬವನ್ನು ಸನ್ಮಾನ್ಯ ಶ್ರೀ ಬಾಲಗಂಗಾಧರ್ ತಿಲಕ್ ರವರು ಬ್ರಿಟಿಷರ ವಿರುದ್ಧ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಗ್ಗಟ್ಟು ಪ್ರದರ್ಶಿಸಿ, ಮುಂದಿನ ಹೋರಾಟದ ರೂಪುರೇಷೆ ತಯಾರಿಸಲು ಸರ್ವ ಧರ್ಮದ ಭಾವೈಕ್ಯತೆಯ ಪ್ರತೀಕವಾಗಿದ್ದ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಬಂದಿದ್ದು ಇತಿಹಾಸ ಆದರೇ ಕಳೆದ ಎರಡು ವರ್ಷಗಳಿಂದ ಬಿಜೆಪಿ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಕೋವಿಡ್ 19 ಕೊರೊನಾ ನೆಪದಲ್ಲಿ ಅಡ್ಡಗಾಲು ಹಾಕುತ್ತಿರುವುದು ಎಷ್ಟು ಸರಿ…..,?

ಇನ್ನೊಂದಡೆ ಇದೇ ಬಿಜೆಪಿ ಸರ್ಕಾರ ಹೋದ ವರ್ಷ ನೆಡೆದ ಲೋಕಸಭಾ & ವಿಧಾನಸಭಾ ಉಪ ಚುನಾವಣೆಯಲ್ಲಿ ಲಕ್ಷಾಂತರ ಜನರನ್ನು ಬಹಿರಂಗ ಚುನಾವಣಾ ಸಭೆಯಲ್ಲಿ ಸೇರಿಸಿದ್ದು, ನೆಡೆದಿದ್ದು ಮರೆತಂತೆ ಇದೇ ಆ ಸಮಯದಲ್ಲಿ ಕೋವಿಡ್ ಕೊರೊನಾ ನಿಯಮ ಮಂಗಮಾಯವಾಗಿತ್ತೇ…….?! ಇತ್ತೀಚಿಗೆ ಬಿಜೆಪಿ ಜನಸ್ಪಂದನಾ ಜಾಥಾದಲ್ಲಿ ಸೇರುತ್ತಿದ್ದ ಸಾವಿರಾರು ಬಿಜೆಪಿ ಪಕ್ಷದ ಕಾರ್ಯಕರ್ತರು ಆಗ ಕೋವಿಡ್ ನಿಯಮ ಕಣ್ಮರೆಯಾಗಿತ್ತಾ……..?! ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಮಾತ್ರಾ ಇಲ್ಲಸಲ್ಲದ ಈ ಕೋವಿಡ್ ನಿಯಮ ಪಾಲನೆ ಎಷ್ಟು ಸರಿ…..?!
ಕೂಡಲೇ ಬಿಜೆಪಿ ಸರ್ಕಾರ ಮುಕ್ತವಾಗಿ ಸಾರ್ವಜನಿಕ ಗಣೇಶೋತ್ಸವ ಹಾಗೂ ವೈಯಕ್ತಿಕ ಗಣೇಶೋತ್ಸವ ಆಚರಿಸಲು ಅನುವು ಮಾಡಿಕೊಟ್ಟು, ಜಾತ್ಯತೀತವಾಗಿ, ಸರ್ವ ಧರ್ಮದವರು ಎಂದಿನಂತೆ ಭಾವೈಕ್ಯತೆಯ ಈ ಹಬ್ಬವನ್ನು ಅದ್ದೂರಿಯಾಗಿ, ವರ್ಷದಲ್ಲಿ ಒಂದಿಷ್ಟು ದಿನ ಸಾರ್ವಜನಿಕರು, ಭಕ್ತಾದಿಗಳು ಮನೋರಂಜನೆಯನ್ನಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಕ್ತವಾಗಿ ಸವಿಯುವಂತೆ ಬಿಜೆಪಿ ಸರ್ಕಾರ ಕ್ರಮಕೈಗೊಳ್ಳಲಿ ಎಂದು ಸಾಗರದ ಎನ್.ಎಸ್.ಯು.ಐ ಉಪಾಧ್ಯಕ್ಷ ಶ್ರೀ ಚಿಂಟು ಸಾಗರ್ ಗುಡುಗಿದ್ದಾರೆ.

ವರದಿ: ಸಿಸಿಲ್ ಪಿ.ಎಸ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
