ಬೆಂಗಳೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು 46ನೆ ವಸಂತಕ್ಕೆ ಪಾದರ್ಪಣೆ ಮಾಡದಿದ್ದಾರೆ, ಸಾಂಸಾರಿಕ ಹಾಗೂ ಸದಭಿರುಚಿ ಸಿನಿಮಾಗಳ ರಾಯಭಾರಿಯಾಗಿರುವ ಅಪ್ಪು ಅವರು ನಟನೆಗಷ್ಟೇ ತಮ್ಮ ಕಲಾಸೇವಿಯನ್ನ ಸೀಮಿತಗೊಳಿಸದೆ, ಗಾಯಾಕರಾಗಿ, ಸಿನಿಮಾ ನಿರ್ಮಾಪಕರಾಗಿ(P. R. K PRODUCTIONS) ಬಂಡವಾಳ ಹೂಡಿ- ಹೊಸ ಪ್ರತಿಭೆಗಳನ್ನ ಗುರುತಿಸುತ್ತ ಅವರಿಗೆ ಸದವಕಾಶ ನೀಡುವಲ್ಲಿ ಮುಂದಾಗಿದ್ದಾರೆ. ಪ್ರತಿ ವರ್ಷ ಸಹಸ್ರಾರು ಅಭಿಮಾನಿಗಳ ನಡುವೆ ಬೆರೆತು ಅವರು ಪ್ರೀತಿಯಿಂದ ತರುತ್ತಿದ್ದ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚಾರಿಸಿಕೊಳ್ಳುತ್ತಿದ್ದ ಪವರ್ ಸ್ಟಾರ್ ಈ ಬಾರಿ ಪಾಂಡೆಮಿಕ್ನ ಕಾರಣವಾಗಿ ಆ ವಾದಿಕೆಯನ್ನ ಕೈ ಬಿಟ್ಟಿದ್ದಾರೆ, ಹೆಚ್ಚು ಜನ ಸೇರಿದ್ದಲ್ಲಿ ತೊಂದರೆ ಉಂಟಾಗಬಹುದೆಂಬ ಜಾಗೃತೆ ವಹಿಸಿದ್ದಾರೆ, ವಾಸ್ತವ ಅರಿತ ಅಭಿಮಾನಿಗಳು ನೆಚ್ಚಿನ ನಟನಿಗೆ ಸಾಮಾಜಿಕ ಅಂತರ್ಜಾಲದಲ್ಲಿ ಶುಭಾಷಯದ ಮಾಹಾಪೂರವನ್ನ ಹರಿಸಿದ್ದಾರೆ. ಪುನೀತ್ ಅವರ ಎರಡು ಹೊಸ ಸಿನಿಮಾಗಳು ಕೂಡ ಇಂದಿನಿಂದ ಪ್ರಾರಂಭಗೊಳ್ಳಲ್ಲಿದ್ದು ಅಭಿಮಾನಿಗಳಿಗೆ ಪುನೀತ್ ಅವರು ನೀಡಿರುವ ದೊಡ್ಡ ಗಿಫ್ಟ್ ಇದಾಗಿದೆ. ಏಪ್ರಿಲ್ 1ಕ್ಕೆ ಪುನೀತ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಯುವರತ್ನ ಬಿಡುಗಡೆಯಾಗಲಿದ್ದು, ಚಿತ್ರ ರಸಿಕರಲ್ಲಿ ಆತುರ ಹೆಚ್ಚಾಗಿದೆ. ಸದಾ ಚಿರ ಯುವಕನಂತೆ ಕಾಣುವ, ಎಲ್ಲರಲ್ಲೂ ನಗು ಸಂತಸ ತರುವ ಪವರ್ ಸ್ಟಾರ್ ಪುನೀತ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..

ವರದಿ: P. ಘನಶ್ಯಾಮ್ – ಬೆಂಗಳೂರು
