ಸಾಗರ: ನೆನಪು ಸಾಗರದ ಸಂಜಯ್ ಮೇಮೋರಿಯಲ್ ಪಾಲಿಟೆಕ್ನಿಕ್.
ಅದೊಂದು ಸುಂದರ ನಗರಿ ಸುತ್ತ ಹಚ್ಚಹಸಿರ ಕಾನನ ಮಲೆನಾಡ ಗಿರಿಶ್ರೇಣಿ ಭೋರ್ಗರೆಯುತ್ತಿರುವ ವಿಶ್ವವಿಖ್ಯಾತ ಜೋಗ ಜಲಪಾತ,, ಆಗೊರೇಶ್ವರನ ಇಕ್ಕೇರಿ ಶರಾವತಿ ದ್ವೀಪದಲ್ಲಿ ನೆಲೆಸಿದ ಶ್ರೀ ಕ್ಷೇತ್ರ ಸಿಗಂದೂರು ತಾಯಿ ಚೌಡೇಶ್ವರಿ, ಗುರುವರ್ಯ ಶ್ರೀ ಶ್ರೀಧರ ಸ್ವಾಮಿ ವರದಳ್ಳಿ, ರಾಜ್ಯ ಪ್ರಸಿದ್ಧಿ ಮಾರಿಕಾಂಬ. ಹೀಗೆ ಹತ್ತು ಹಲವು ಬಗೆಯ ವೈವಿಧ್ಯಮಯ ನಾಡು #ನಮ್ಮ_ಸಾಗರ.

ಈ ನಾಡಿನಲ್ಲಿ ನಾಲ್ಕು ದಶಕಗಳ ಹಿಂದೆ 1980 ರಲ್ಲಿ ಮಾನ್ಯ ಕಾಗೋಡು ತಿಮ್ಮಪ್ಪನವರ ಅಧ್ಯಕ್ಷತೆಯಲ್ಲಿ ಮಾಜಿ ಪ್ರಧಾನಿ ಸಂಜಯ್ ಗಾಂಧಿಯವರ ನೆನಪಿನಾರ್ಥವಾಗಿ ಸಂಜಯ್ ವಿದ್ಯಾ ಕೇಂದ್ರವನ್ನು ಸಾಗರದಲ್ಲಿ ಸ್ಥಾಪಿಸಿದರು ಅದೇ ಸಂಜಯ್ ಮೇಮೋರಿಯಲ್ ಪಾಲಿಟೆಕ್ನಿಕ್ ಅಂದು ನೂರಾರು ಉತ್ಸಾಹಿ ಶಿಕ್ಷಕರು ಸಿಬ್ಬಂದಿಗಳು ಕಾಗೋಡು ತಿಮ್ಮಪ್ಪನವರಿಗೆ ಕೈಜೋಡಿಸಿ ಒಂದು ಶಿಕ್ಷಣ ಸಂಸ್ಥೆಯನ್ನು ಮೊಳಕೆಯ ಹಂತದಿಂದ ಬೆಳೆಸಲು ಪ್ರಾರಂಭಿಸಿದರು. ತಮ್ಮ ನಿಸ್ವಾರ್ಥ ಸೇವೆ ಹಾಗೂ ಸದುದ್ದೇಶದಿಂದ ಸ್ಥಾಪಿತವಾದ ಒಂದು ಕಾಲೇಜು ಸ್ಥಳೀಯ ಲಿಂಗನಮಕ್ಕಿ ಮುಳುಗಡೆ ಸಂತ್ರಸ್ತರ ಮಕ್ಕಳು ಎಷ್ಟು ಬಡ ಕುಟುಂಬಗಳ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡಿ ಯಾವುದೇ ಜಾತಿ ಧರ್ಮ ಬೇಧವಿಲ್ಲದೆ ಶಿಕ್ಷಣವನ್ನು ನೀಡುತ್ತಾ ಜೊತೆಜೊತೆಗೆ ಉಪನ್ಯಾಸಕರ ಕಠಿಣ ಪರಿಶ್ರಮದಿಂದ ಸಂಸ್ಥೆ ಹಂತ ಹಂತವಾಗಿ ಬೆಳೆಯಿತು. ಇದನ್ನು ಗುರುತಿಸಿ ಗುರುತಿಸಿದ ಸರ್ಕಾರ 2000 ಇಸವಿಯಲ್ಲಿ ರಾಜ್ಯ ಸರ್ಕಾರ ಸಂಸ್ಥೆಯನ್ನು ಸರ್ಕಾರದ ಅನುದಾನಕ್ಕೆ ಒಳಪಡಿಸಿ ಸಂಸ್ಥೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿ ಹಾಗೂ ತಾಂತ್ರಿಕ ಶಿಕ್ಷಣ ಪಡೆಯಲಿಚ್ಚಿಸುವ ಮಕ್ಕಳಿಗೆ ಹಾಗೂ ಪೋಷಕರಿಗೆ ಇದು ತುಂಬಾ ಸಹಕಾರಿಯಾಯಿತು.ಇಂದು ಸಾಗರಕ್ಕೆ ಸೀಮಿತವಾಗದ ಕಾಲೇಜು ಸಂಪೂರ್ಣ ಮಲೆನಾಡು ಜಿಲ್ಲೆಯಲ್ಲಿರುವ ಒಂದು ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ ದೂರದ ನೂರಾರು ಕಿಲೋಮೀಟರ್ ವ್ಯಾಪ್ತಿಯಿಂದ ಮಕ್ಕಳು ಇಲ್ಲಿ ಬಂದು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ ಡಿಪ್ಲೋಮೋ ಎಂದೊಡನೆ ಮಲೆನಾಡು ಜಿಲ್ಲೆಯಲ್ಲಿ ಮೊದಲಿಗೆ ಬರುವುದು ಸಂಜಯ್ ಮೆಮೊರಿಯಲ್ ಪಾಲಿಟೆಕ್ನಿಕ್. ಇಲ್ಲಿನ ಮಕ್ಕಳಿಗೆ ಕಾಲೇಜು ಉತ್ತಮ ಮನೆಯಂತೆ ಭಾಸವಾದರೆ ಉಪನ್ಯಾಸಕ ವರ್ಗದವರು ತಂದೆ ತಾಯಿಯಂತೆ ಕಾಣುತ್ತಾರೆ ಕಾರಣ ಇಲ್ಲಿರುವ ಸುಸಂಸ್ಕೃತ ಬಾಂಧವ್ಯ. ಶಿಕ್ಷಣಕ್ಕೆ ಅಷ್ಟೇ ಸೀಮಿತವಾಗದ ಕಾಲೇಜು ಸಾಂಸ್ಕೃತಿಕವಾಗಿ ಕ್ರೀಡೆಯಲ್ಲಿ ಮುಂದುವರೆದಿದೆ.

ಈ ಒಂದು ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದ ವಿದ್ಯಾರ್ಥಿಗಳು ಇಂದು ಸಮಾಜದ ಉತ್ತಮ ಸ್ಥಾನದಲ್ಲಿದ್ದಾರೆ ನೂರಾರು ವಿದ್ಯಾರ್ಥಿಗಳು ವಿದೇಶದಲ್ಲಿ ನೆಲೆಸಿದ್ದಾರೆ ತಾಂತ್ರಿಕವಾಗಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉದ್ಯಮ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಮುಂಚೂಣಿಯಲ್ಲಿದ್ದಾರೆ. ವಿದ್ಯಾರ್ಥಿಗಳನ್ನು ಈ ಮಟ್ಟದಲ್ಲಿ ತಯಾರಿ ಮಾಡಿದ ಸಂಪೂರ್ಣ ಶ್ರೇಯಸ್ಸು ಇಲ್ಲಿನ ಉಪನ್ಯಾಸಕರಿಗೆ ಸೇರುತ್ತದೆ…. ಅವರ ಮಾರ್ಗದರ್ಶನವೇ ಜೀವನದ ದಾರಿಯಾಗಿದೆ…..ಇಲ್ಲಿನ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಹಳೆ ವಿದ್ಯಾರ್ಥಿಗಳೆಲ್ಲಾ ಕೂಡಿ ಸಾಗರಸಂಗಮ ಹಾಗೂ ಅಲುಮಿನಿ ಅಸೋಸಿಯೇಷನ್ ಎಂಬ ಎರಡು ಬೃಹತ್ ಮಟ್ಟದ ಸಂಘಗಳನ್ನು ಹುಟ್ಟುಹಾಕಿ ಇಲ್ಲಿ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಕೆಲಸ ಕೊಡಿಸುವ ಕಾರ್ಯ ನಡೆಯುತ್ತಿದೆ…..
ಯಾವುದೇ ಮೆಟ್ರೋ ಸಿಟಿಯಲ್ಲಿ ತಮ್ಮ ಇಂಜಿನಿಯರಿಂಗ್ ಪದವಿ ಪಡೆದರು ಹಿಂತಿರುಗಿ ನೋಡಿದಾಗ ಸಾಗರ ಎಂಬುದು ಒಂದು ಅದ್ಭುತವಾದ ಅನುಭವವನ್ನು ನೀಡುತ್ತದೆ….. ಪ್ರತಿಯೊಬ್ಬ ವಿದ್ಯಾರ್ಥಿಗೂ ಸಾಗರ ಎಂದೊಡನೆ ನೆನಪಿಗೆ ಬರುವ ವಿಶೇಷವಾದ ಸ್ಥಳಗಳು ಕಾಲೇಜು ಕ್ಯಾಂಪಸ್, ಕಾಲೇಜು ಕ್ಯಾಂಟೀನ್, ಇಕ್ಕೇರಿ ಸರ್ಕಲ್, ಭರಣಿ ಮೆಸ್, ಓಂಕಾರಿ ಜೆರಾಕ್ಸ್ ಅಂಗಡಿ, ಗಣಾಧೀಶ್ವರ ಪಿಜಿ, ಭಟ್ರು ಪಿಜಿ, SNನಗರ ಬಟ್ರು ಪಾನಿಪುರಿ ಅಂಗಡಿ, ಜಿತಿನ್ ಝರಾಕ್ಸ್, RTO ಗ್ರೌಂಡ್, ವರದಾ ಆಶ್ರಮದ ಮಧ್ಯಾಹ್ನದ ಸಿಹಿ ಊಟ, ವರದಳ್ಳಿಯ ಸೈಕಲ್ ಜಾಥಾ, ಶನಿವಾರ ಬಂತೆಂದರೆ ನಗರದ ಗಣಪತಿ ದೇವಸ್ಥಾನ ದಿಂದ ಹಿಡಿದು ಹಾಸ್ಟೆಲ್ ಹಾಗೂ ಪಿಜಿ ವಿದ್ಯಾರ್ಥಿಗಳ ಸಾಲು ತಂಡೋಪತಂಡವಾಗಿ ಆಂಜನೇಯ ದೇವಸ್ಥಾನ, ಮಾರಿಕಾಂಬ ದೇವಸ್ಥಾನ ಶನಿವಾರದ ಭಕ್ತಿ ಅಂತೂ ನೆನಸಿಕೊಂಡರೆ ನೂರಾರು ವರ್ಷಗಳಿಗಾಗುವಷ್ಟು ಪೂಜೆ ಅಂದೆ ನಡೆದಿರಬಹುದು…!!! ಸ್ಥಳೀಯ ಪ್ರತಿವರ್ಷದ ಗಣಪತಿ ಜಾತ್ರೆ ನಮಗೆಲ್ಲಾ ಹಬ್ಬದಂತೆ ಇರುತ್ತಿತ್ತು, ವೆಲ್ಕಮ್ ಪಾರ್ಟಿ, ಸೆಂಡಾಫ್ ಪಾರ್ಟಿ, ಕಾಲೇಜು ವಾರ್ಷಿಕೋತ್ಸವ, ಕಾಲೇಜು ಕ್ರೀಡಾಕೂಟ,….ನಮ್ಮ ನಡುವೆಯೇ ಇದ್ದ ಸ್ಥಳೀಯ ಮಿತ್ರರು ಅದೊಂದು ಸ್ಟಾರ್ ಗ್ಯಾಂಗ್ ಎಂದೇ ಹೇಳಬಹುದು ಒಂದೊಂದು ಏರಿಯಾಗೆ ನಮಗೊಬ್ಬ ಲೀಡರ್ ಇದೊಂದು ವಿದ್ಯಾರ್ಥಿ ಜೀವನದ ಹೊರಪ್ರಪಂಚ ನಮ್ಮಗಳ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಟೂರ್ನಮೆಂಟ್ ಕಾಲೇಜು ಚುನಾವಣೆಯ ಪೈಪೋಟಿ ಇನ್ನಿತರ ಆಹ್ಲಾದಕರ ಘಟನೆಗಳು….. ಈ ರೀತಿ ಜೀವನದ ವಿದ್ಯಾರ್ಥಿ ಘಟಕದಲ್ಲಿ ಅತಿ ಹೆಚ್ಚು ಪ್ರತಿಯೊಬ್ಬರ ಮನಸ್ಸಿಗೆ ಹಿಡಿಸಿದ ಕಾಲಘಟ್ಟವದು.. ಇಂದಿಗೂ ಸಹ ಒಮ್ಮೆ ಸಾಗರ ಎಂದಾಗ ಪ್ರತಿಯೊಂದು ವಿಚಾರವೂ ಒಂದು ಕ್ಷಣ ನಮ್ಮ ಮನಸ್ಸಿನಲ್ಲಿ ವರ್ಣರಂಜಿತವಾಗಿ ಕಾಣಿಸುತ್ತದೆ.
#ಸ್ನೇಹಿತರೆ ಈ ಒಂದು ಸುಂದರ ನೆನಪುಗಳು ನಮ್ಮ ಜೀವನದಲ್ಲಿ ಶಾಶ್ವತವಾಗಿ ಉಳಿದಿವೆ ನಾವೆಲ್ಲಾ ಇಲ್ಲಿನ ವಿದ್ಯಾರ್ಥಿಗಳು ಎಂದು ಹೇಳಿಕೊಳ್ಳುವುದಕ್ಕೆ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ. ಆದರೆ ಒಂದು ದುರಾದೃಷ್ಟ ನಮ್ಮ ಬೆನ್ನತ್ತಿದೆ ನಾಲ್ಕು ದಶಕಗಳಿಂದ ನಡೆದುಬಂದ ಕಾಲೇಜು ಇಂದು ದುಷ್ಟರ ಕೈಗೆ ಸಿಲುಕಿ ನಡುಗುತ್ತಿದೆ..ಕೆಲವು ಕೆಟ್ಟ ವ್ಯಕ್ತಿಗಳ ಕೆಟ್ಟ ಕಣ್ಣು ನಮ್ಮ ಸಂಸ್ಥೆಯ ಮೇಲೆ ಬಿದ್ದಿದ್ದು ನಮ್ಮ ನೆನಪುಗಳಿಗೆ ಅವರು ಮುಳ್ಳಾಗಿದ್ದಾರೆ.... ಕಾಗೋಡು ಸಾಹೇಬರ ಪರಿಶ್ರಮಕ್ಕೆ ಅವರ ನಿಸ್ವಾರ್ಥ ಸೇವೆಗೆ ಇಂದು ಕಳಂಕವಾಗಿ ಅವರ ಮಕ್ಕಳು ಅಧಿಕಾರದ ಚುಕ್ಕಾಣಿ ಹಿಡಿದು ಕಾಲೇಜನ್ನು ಮುಚ್ಚಿ ಹಣ ಮಾಡಲು ಹೊರಟಿರುವುದು ದುರ್ದೈವದ ಸಂಗತಿ.... ಹಳೆವಿದ್ಯಾರ್ಥಿಗಳ ಭಾವನೆಗೆ ಕೊಳ್ಳಿಯಿಟ್ಟು. ಉಪನ್ಯಾಸಕ ಹಾಗೂ ಸಿಬ್ಬಂದಿ ವರ್ಗದವರಿಗೆ ಮಾನಸಿಕವಾಗಿ ಹಿಂಸಿಸುತ್ತಾ... ಮಲೆನಾಡ ಮುಂದಿನ ಮಕ್ಕಳಿಗೆ ಇರಬೇಕಾದಂತಹ ಕಾಲೇಜನ್ನು ಶಾಶ್ವತವಾಗಿ ಮುಚ್ಚಿ ಖಾಸಗಿ ಶಾಲೆಯನ್ನು ನಡೆಸಲು ಹುನ್ನಾರ ನಡೆಸುತ್ತಿದ್ದಾರೆ.... ಇದೊಂದು ಶೋಚನೀಯ ಸಂಗತಿ ಎಂದರು ತಪ್ಪಾಗಲಾರದು.....
ಮಿತ್ರರೇ ಪರಿಸ್ಥಿತಿ ಸಂಪೂರ್ಣವಾಗಿ ಕೈಮೀರಿ ಹೋಗಿದೆ ಕಾಲೇಜನ್ನು ಮುಚ್ಚಿಯೇ ತೀರುವುದಾಗಿ ಅವರ ಪ್ರಯತ್ನಗಳು ನಡೆಯುತ್ತಿದೆ.. ನಮ್ಮಗಳ ಭಾವನೆಗಳ ಜೊತೆ ಆಟವಾಡುತ್ತಿರುವ ಈಗಿನ ಆಡಳಿತ ಮಂಡಳಿ ಹಾಗೂ ಅವರ ಜೊತೆ ಕೈಜೋಡಿಸಿರುವ ಪ್ರಾಂಶುಪಾಲರು ಇದಕ್ಕೆ ಉತ್ತರಿಸಬೇಕು… ಪರಿಸ್ಥಿತಿ ಹೀಗೆ ಮುಂದುವರಿದರೆ ಹಳೆ ವಿದ್ಯಾರ್ಥಿಗಳು ಕಾಲೇಜಿನ ಬೆಂಬಲಕ್ಕೆ ನಿಂತು ಹೋರಾಡುವಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.
ನಮ್ಮ ಕಾಲೇಜು ನಮ್ಮ ಹೆಮ್ಮೆ ಎಂದಿಗೂ ನಾವು ಕಾಲೇಜನ್ನು ಕಳೆದುಕೊಳ್ಳುವುದು ಇಚ್ಚಿಸುವುದಿಲ್ಲ, ಸಮಯ ಬಂದರೆ ನಾವೆಲ್ಲ ಕಾಲೇಜಿಗೆ ಧ್ವನಿಯಾಗೋಣ.

ಲೇಖನ: ಶರತ್ ಶಂಕರಘಟ್ಟ
ಹಳೆ ವಿದ್ಯಾರ್ಥಿ
ಸಂಜಯ್ ಮೇಮೋರಿಯಲ್ ಪಾಲಿಟೆಕ್ನಿಕ್
