ಸಾಗರ: ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು – ಸಿಸಿಲ್ ಸೋಮನ್

ಬಕ್ರೀದ್ ತ್ಯಾಗ ಮತ್ತು ಬಲಿದಾನದ ಸಂಕೇತ, ವಿಶ್ವದಾದ್ಯಂತ ಮುಸ್ಲಿಂ ಧರ್ಮೀಯರು ಶ್ರದ್ಧಾಭಕ್ತಿಯಿಂದ ಆಚರಿಸುವ ಎರಡನೆಯ ಅತಿ ದೊಡ್ಡ ಹಬ್ಬ.
ಈದುಲ್ ಅಝ್‌ಹಾ ಅಥವಾ ಬಕ್ರೀದ್ ಹಬ್ಬದ ಮಹತ್ವ ಎಂದರೆ ಸಾವಿರಾರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹಿಂ ಅವರು ಮಾಡಿದ್ದ ತ್ಯಾಗ ಬಲಿದಾನದ ಸ್ಮರಣೆಯೇ ಈ ಹಬ್ಬದ ವೈಶಿಷ್ಟ್ಯ. ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದಿನ ಘಟನೆ ನೆನಪಿಸುತ್ತದೆ ಬಕ್ರೀದ್. ಇಸ್ಲಾಮಿನ ಪ್ರವಾದಿಗಳ ಪೈಕಿ, ಏಕದೇವ ವಿಶ್ವಾಸದ ಅನುಷ್ಠಾನಕ್ಕಾಗಿ ಸ್ವಂತ ಹೆತ್ತವರು, ಕುಟುಂಬ, ಮನೆ, ಆಸ್ತಿ, ಊರು ತ್ಯಾಗ ಮಾಡಿ ದೇಶಾಂತರ ಹೊರಟು, ದೇವಾದೇಶದಂತೆ ವೃದ್ಧಾಪ್ಯದಲ್ಲಿ ಸ್ವಂತ ಮಗನನ್ನೂ ಬಲಿ ಕೊಡಲು ಹೊರಟ ಪ್ರವಾದಿ ಇಬ್ರಾಹಿಂ ಇತಿಹಾಸವನ್ನು ನೆನಪಿಸುವುದೇ ಬಕ್ರೀದ್ ಆಚರಣೆ ಉದ್ದೇಶ.

ತ್ಯಾಗ, ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬ ಸರ್ವರಿಗೂ ಮಂಗಳ ತರಲಿ. ಪರಸ್ಪರ ಸಹೋದರತೆ, ಐಕ್ಯತೆಯನ್ನು ಇನ್ನಷ್ಟು ಬಲಪಡಿಸಲಿ . ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಯ್ದುಕೊಂಡು ಬಕ್ರೀದ್ ಹಬ್ಬವನ್ನು ಆಚರಿಸುವಿರೆಂದು ಆಶಿಸುತ್ತೇನೆ.


ವರದಿ: ಸಿಸಿಲ್ ಸೋಮನ್
