ಸಾಗರ: ಧಾರ್ಮಿಕ ಸ್ಥಳಗಳ ತೆರುವಿನ ಬಗ್ಗೆ ಆತಂಕ ಬೇಡ – ಬಿಜೆಪಿ ನಗರ ಅಧ್ಯಕ್ಷ ಗಣೇಶ್ ಪ್ರಸಾದ್ ಭರವಸೆ.

ಸನ್ಮಾನ್ಯ ಶಾಸಕರಾದ ಶ್ರೀ ಹರತಾಳು ಹಾಲಪ್ಪನವರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಟಿ ಡಿ ಮೇಘರಾಜರವರ ಸಲಹೆ ಮೇರೆಗೆ ನಿನ್ನೆ ಸಾಗರ ನಗರದ 65 ಕ್ಕೂ ಹೆಚ್ಚು ಧಾರ್ಮಿಕ ಕೇಂದ್ರಗಳು ಹಾಗೂ ದೇವಸ್ಥಾನಗಳ ಪ್ರಮುಖರಾದ ವಿವಿಧ ಸಮುದಾಯಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸಾಗರ ನಗರ ಬಿಜೆಪಿಯಿಂದ ಆಹ್ವಾನಿತ, ಅಜಿತ್ ಸಭಾಭವನದ ಸಭೆಯಲ್ಲಿ ಸೇರಿದ್ದರು. ಸಾಗರ ನಗರಸಭೆಯ ಅಧ್ಯಕ್ಷೆ ಶ್ರೀಮತಿ ಮಧುರಾ ಶಿವಾನಂದ್, ಉಪಾಧ್ಯಕ್ಷ ಶ್ರೀ ವಿ ಮಹೇಶ್ ರವರೂ, ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀ ತುಕಾರಾಮ ರವರು, ನಗರಸಭಾ ಸದಸ್ಯ ಶ್ರೀ ಶ್ರೀನಿವಾಸ, ಶ್ರೀ ದೀಪಕ್ ಮರೂರ್ ಹಾಗೂ ಶ್ರೀ ರತ್ನಾಕರ ಶೇಟ್ ಉಪಸ್ಥಿತರಿದ್ದ ಈ ಸಭೆಯಲ್ಲಿ ಪಕ್ಷ ಹಾಗೂ ನಗರಾಡಳಿತದ ಕಡೆಯಿಂದ ಮಾತನಾಡುತ್ತಾ, ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ, ಸಕ್ರಮವಲ್ಲದ ಎನ್ನಲಾದ ಧಾರ್ಮಿಕ ಸ್ಥಳಗಳನ್ನು ತಕ್ಷಣವೇ ತೆರವು ಮಾಡಲಾಗುವುದು ಎನ್ನುವ ವಿಷಯ ನಿಜವಲ್ಲ ಎಂದು ಗಣೇಶ ಪ್ರಸಾದ್ ಸ್ಪಷ್ಟನೆ ನೀಡಿದರು. ನಗರಸಭಾ ಅಧ್ಯಕ್ಷರು ನಗರಾಡಳಿತದ ಕಡೆಯಿಂದ ಸಮಸ್ಯೆ ಪರಿಹಾರಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಸವಿವರ ವಿವರಿಸಿದರು. ಧಾರ್ಮಿಕ ಸ್ಥಳಗಳ ಬಗ್ಗೆ ತಮ್ಮಲ್ಲಿ ಇರುವ ದಾಖಲೆಗಳನ್ನು ನೀಡಲು ಸಂಬಂಧ ಪಟ್ಟವರಲ್ಲಿ ವಿನಂತಿಸಿದರು ಹಾಗೂ ಅದರಲ್ಲಿ ನ್ಯೂನ್ಯತೆಗಳಿದ್ದಲ್ಲಿ ಅವುಗಳನ್ನು ಸರಿಪಡಿಸಿ ಕೊಡುವುದಾಗಿ ಭರವಸೆ ನೀಡಿದರು. ಧಾರ್ಮಿಕ ಸ್ಥಳಗಳನ್ನು ಉಳಿಸಿಕೊಂಡು ಹೋಗಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದಾಗಿಯೂ ಭರವಸೆ ನೀಡಿದರು.

ಸಭೆಯಲ್ಲಿದ್ದ ಧಾರ್ಮಿಕ ಸ್ಥಳಗಳ ಪ್ರಮುರೆಲ್ಲರೂ ಬಿಜೆಪಿ ಪಕ್ಷವು ನಗರಾಡಳಿತದ ಪರವಾಗಿ ನೀಡಿದ ಭರವಸೆಗಳಿಗಾಗಿ ತಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು ಹಾಗೂ ಅನೇಕ ಅನುಮಾನಗಳ ಬಗ್ಗೆ ಸ್ಪಷ್ಟನೆ ಪಡೆದುಕೊಂಡರು. ಅಲ್ಲದೆ ತಮಗೆಲ್ಲರಿಗೂ ಅತ್ಯಂತ ಪವಿತ್ರವಾಗಿರುವ ಧಾರ್ಮಿಕ ಸ್ಥಳಗಳು ಖಂಡಿತಾ ಸುರಕ್ಷಿತವಾಗಿ ಇರುತ್ತವೆ ಎಂದು ನಂಬುವುದಾಗಿ ತಿಳಿಸಿದರು.
ಕೊನೆಯದಾಗಿ, ಧಾರ್ಮಿಕ ಜನತೆಯ ಪರವಾಗಿ ಅಗತ್ಯವಿರುವ ಎಲ್ಲಾ ಸಹಕಾರ ನೀಡಲು ಪಕ್ಷ ಬದ್ಧವಾಗಿರುವುದಾಗಿ ಶ್ರೀ ಗಣೇಶ್ ಪ್ರಸಾದ್ ಭರವಸೆ ನೀಡಿದರು ರಾಜೇಂದ್ರ ಪೈ ಹೆಚ್ ನಗರಸಭಾ ಸದಸ್ಯ ಹಾಗೂ ಸಂಚಾಲಕ ಸಾಮಾಜಿಕ ಜಾಲತಾಣ ಬಿಜೆಪಿ ಸಾಗರ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
