ಶಿವಮೊಗ್ಗ: ದೇಶಾದ್ಯಂತ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರದ ಮಾರ್ಗ ಸೂಚಿಯನ್ನು ಪಾಲಿಸಿ – ಶ್ರೀ ಬಿವೈ ರಾಘವೇಂದ್ರ ಸಂಸದರು.
“ಕೊರೋನಾ ಸಹಾಯವಾಣಿ ಕೇಂದ್ರ”.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೊರೋನಾ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಹಸ್ತ ಹಾಗೂ ಸೇವೆ ಒದಗಿಸಲು ನನ್ನ ಕಚೇರಿಯಲ್ಲಿ ಕೊರೋನಾ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದೆ. ತುರ್ತು ಸೇವೆಗಾಗಿ ಕ್ಷೇತ್ರದ ಜನತೆಯು ಈ ಸಂಬಂಧ ನಿಯೋಜಿತರಾದ ಪ್ರಮುಖರನ್ನು ಸಂಪರ್ಕಿಸಬೇಕೆಂದು ಮನವಿ ಮಾಡುತ್ತೇನೆ.

ದೇಶಾದ್ಯಂತ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರದ ಮಾರ್ಗ ಸೂಚಿಯನ್ನು ಪಾಲಿಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಎಚ್ಚರವಿರಲಿ, ಭಯ ಬೇಡ ಗೊಂದಲಕ್ಕೊಳಗಾಗದೇ ಜಾಗೃತರಾಗಿರಿ. ಮನೆಯಲ್ಲಿಯೇ ಇರಿ ಸುರಕ್ಷಿತವಾಗಿರಿ, ನಿಮ್ಮ ಮನೆಯವರನ್ನು ಸುರಕ್ಷಿತವಾಗಿರಿಸಿ.

ವರದಿ: ಸಿಸಿಲ್ ಸೋಮನ್

