ತೀರ್ಥಹಳ್ಳಿ: ತೀರ್ಥಹಳ್ಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಭೇಟಿ ಸಾಧ್ಯತೆ – ಲಿಯೋ ಅರೋಜ ತೀರ್ಥಹಳ್ಳಿ.
ಸಿದ್ಧರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್ .ರಾಜ್ಯದ ಜನತೆ ಯಾರು ಬಡತನದಲ್ಲಿ ಕಷ್ಟದಲ್ಲಿ ಊಟವಿಲ್ಲದೆ ಮಲಗಬಾರದು ಅಂಥ ಸ್ಥಿತಿ ತನ್ನ ಆಡಳಿತ ರಾಜ್ಯದಲ್ಲಿ ಇರಬಾರದು ಎಂಬಮಹತ್ವದ ಉದ್ದೇಶ ಮತ್ತು ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಇಂದಿರಾ ಕ್ಯಾಂಟಿನಿನಲ್ಲಿ ಪ್ರಾರಂಭಕ್ಕೆ ಮುಂದಾದರು .ಈ ಯೋಜನೆಯನ್ನು ಜಾರಿಗೆ ತರಲು ಯಶಸ್ವಿಯಾದರು .ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಅವರು ಸಚಿವರಾದ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಕಚೇರಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಕಟ್ಟಡ ನಿರ್ಮಿಸಲು ಯೋಜನೆ ಹಾಕಲಾಗಿತ್ತು .ಅನಿವಾರ್ಯ ಕಾರಣಗಳಿಂದ ಸಾಧ್ಯವಾಗದೆ ಇದ್ದು ಚುನಾವಣೆ ನಡೆದು ಕಿಮ್ಮನೆಯವರು ಸೋಲು ಕಂಡರು .ಈಗ ಲಾಕ್ ಡೌನ್ ಸಮಯದಲ್ಲಿ ಅನೇಕ ಜನರು ಬಡವರು ಆಹಾರಕ್ಕಾಗಿ ಕಷ್ಟಪಡುವಂತಹ ಸ್ಥಿತಿ ಮುಂದಾದಾಗ ಸ್ವತಃ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ವಿಶೇಷ ಆಸಕ್ತಿ ವಹಿಸಿ ಕಾಂಗ್ರೆಸ್ ಪಕ್ಷ ಮತ್ತು ಯುವ ಕಾಂಗ್ರೆಸ್ ವತಿಯಿಂದ ಜೆಸಿ ಆಸ್ಪತ್ರೆ ಎದುರು ಜ್ಯೂನಿಯರ್ ಕಾಲೇಜು ರಸ್ತೆಯಲ್ಲಿ ಸ್ವಂತ ಖರ್ಚಿನಲ್ಲಿ ಇಂದಿರಾ ಕ್ಯಾಂಟೀನನ್ನು ಪ್ರಾರಂಭ ಮಾಡಿದರು .ಕಾಂಗ್ರೆಸ್ ಧುರೀಣ ಅಮೃಪಾಲಿ ಸುರೇಶ್. ತಾಲ್ಲೂಕು ಪಂಚಾಯಿತಿ ಸದಸ್ಯ ಕೆಳಕೆರೆ ದಿವಾಕರ್ ಉಸ್ತುವಾರಿ ಮತ್ತು ಮಾರ್ಗದರ್ಶನದಲ್ಲಿ ಮತ್ತು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಮತ್ತು ಯುವ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಪ್ರತಿದಿನ ಬೆಳಿಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಮನೆ ಅಡಿಗೆ ರುಚಿಯಂತೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು .ಈಗಾಗಲೇ ಸಾವಿರಾರು ಜನರು ಇಲ್ಲಿ ಬಂದು ಆಹಾರವನ್ನು ಉಚಿತವಾಗಿ ಪಡೆದುಹೊಟ್ಟೆ ತುಂಬ ಊಟ ಮಾಡಿಕೊಂಡು ಸಂತೃಪ್ತಿಗೊಂಡಿದ್ದಾರೆ .ತಮ್ಮ ಹಸಿವನ್ನು ನೀಗಿಸಿ ಕೊಂಡಿದ್ದಾರೆ .ಕಿಮ್ಮನೆ ರತ್ನಾಕರ ಅವರು ಕಾರ್ಯಗತ ಗೊಳಿಸಿರುವ ಉಚಿತವಾಗಿ ಆಹಾರ ಪದಾರ್ಥ ನೀಡುವ ಇಂದಿರಾ ಕ್ಯಾಂಟೀನ್ ಕಾರ್ಯವನ್ನು ವೀಕ್ಷಣೆ ಮಾಡಲು ಶೃಂಗೇರಿ ಶಾಸಕರಾದ ರಾಜೇಗೌಡ ರವರು,ಕಾಂಗ್ರೆಸ್ಸಿನ ರಾಜ್ಯವಕ್ತಾರ ಸಾಮಾಜಿಕ ಚಿಂತಕ ವಾಗ್ಮಿ ವಕೀಲರಾದ ಸುಧೀರ್ ಕುಮಾರ್ ಮುರೋಳಿ , ವಿಧಾನಪರಿಷತ್ ಸದಸ್ಯರಾದ ಪ್ರಸನ್ನಕುಮಾರ್, ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕಲಗೋಡು ರತ್ನಾಕರ್ ,ಹಾಗೂ ಲೋಕಸಭಾ ಸದಸ್ಯರಾದ ಡಿ ಕೆ ಸುರೇಶ್ ರವರು (ರಾಜ್ಯ ಕಾಂಗ್ರೆಸ ಅಧ್ಯಕ್ಷರಾದ .ಡಿ .ಕೆ. ಶಿವಕುಮಾರ್ ರವರ ಸಹೋದರ )ಇನ್ನೂ ಅನೇಕ ಮುಖಂಡರು ಬಂದು ಇಂದಿರಾ ಕ್ಯಾಂಟೀನ್ ಬಗ್ಗೆ ಮೆಚ್ಚುಗೆ ಮತ್ತು ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಈ ರೀತಿ ಖಾಸಗಿ ಯಾಗಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿರುವುದು ರಾಜ್ಯದಲ್ಲೇ ಪ್ರಪ್ರಥಮವಾಗಿ ಇರುತ್ತೆ ಎಂಬ ಹೆಗ್ಗಳಿಕೆ ಮತ್ತು ಹೆಮ್ಮೆಯ ವಿಚಾರವಾಗಿದೆ.ಈ ಬಗ್ಗೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ ಅಧ್ಯಕ್ಷರಾದ. ಡಿ. ಕೆ .ಶಿವಕುಮಾರ್ ಅವರು ವರದಿಯನ್ನು ತರಿಸಿಕೊಂಡಿದ್ದು .ಕಾಲಾವಕಾಶ ಮಾಡಿ ಇಬ್ಬರು ನಾಯಕರು ತೀರ್ಥಹಳ್ಳಿಗೆ ಭೇಟಿ ನೀಡಲಿದ್ದಾರೆಂದು ಮತ್ತು ಇಂದಿರಾ ಕ್ಯಾಂಟೀನನ್ನು ವೀಕ್ಷಣೆ ಮಾಡಲಿದ್ದಾರೆಂದು ಬಲ್ಲಮೂಲಗಳಿಂದ ತಿಳಿದು ಬಂದಿರುತ್ತದೆ .ಇಂದು ಉಡುಪಿ ಲೋಕಸಭಾ ಕ್ಷೇತ್ರದಿಂದ ಮಾಜಿ ಸದಸ್ಯರು ಹಾಗೂ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ರವರು ಸಹ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ .ಅಂತೂ ಕಿಮ್ಮನೆ ರತ್ನಾಕರ್ ಅವರು ತಮ್ಮ ಸ್ವಂತ ಪ್ರಯತ್ನದಲ್ಲಿ ಪ್ರಾರಂಭಿಸಿರುವ ಇಂದಿರಾ ಕ್ಯಾಂಟಿನ್ ರಾಜ್ಯದಲ್ಲಿ ಸದ್ದು ಮಾಡತೊಡಗಿದೆ.

ವರದಿ: ಲಿಯೋ ಅರೋಜ ತೀರ್ಥಹಳ್ಳಿ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
