ಬೆಂಗಳೂರು:- ಜೆ.ಡಿ.ಎಸ್. ಪಕ್ಷದ ರಾಷ್ಟ್ರಾಧ್ಯಕ್ಷರು, ಮಾಜಿ ಪ್ರಧಾನಮಂತ್ರಿ ಹೆಚ್. ಡಿ. ದೇವೇಗೌಡರು ಮತ್ತು ಅವರ ಪತ್ನಿ ಅವರಲ್ಲಿ 31/03/21ರ ಮಧ್ಯಾಹ್ನದಂದು ಕೋವಿಡ್ 19ರ ಸೋಂಕು ಪತ್ತೆಯಾದ ಕಾರಣ ಹೆಚ್ಚಿನ ಚಿಕಿತ್ಸೆ ಪಡೆಯಲು ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪೆತ್ರಗೆ ಸೇರಿದ್ದರು. ಈ ಬೆಳವಣಿಗೆಯನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದು, ಅವರ ಹತ್ತಿರ ಸಂಪರ್ಕದಲ್ಲಿದ್ದ ಎಲ್ಲರಿಗೂ ಕೂಡಲೇ ಕೋವಿಡ್ ಪರಿಕ್ಷೆ ಮಾಡಿಸಿಕೊಳ್ಳಬೇಕಾಗಿ ಮನವಿ ಮಾಡಿಕೊಂಡಿದ್ದಾರೆ ಹಾಗೆಯೇ ತಾನು ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆ ಇಲ್ಲದೆ ಶೀಘ್ರ ಗುಣಮುಖನಾಗಿ ಬರುವೆ ಎಂದು ಹೇಳುತ್ತಾ, ತನ್ನ ಪಕ್ಷದ ಕಾರ್ಯಕರ್ತ್ರಿಗೆ ಹಾಗೂ ಅಭಿಮಾನಿಗಳಿಗೆ ಚಿಂತಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಸುದ್ದಿ ತಿಳಿದ ತಕ್ಷಣ ಖುದ್ದಾಗಿ ದೇವೇಗೌಡರಿಗೆ ಕರೆ ಮಾಡಿ ಕುಶಲೋಪರಿ ವಿಚಾರಿಸುವುದರ ಜೊತೆಗೆ ದೇಶದ ಯಾವುದೇ ದೊಡ್ಡ ಶೆಹರಿನಲ್ಲಿರುವ ಆಸ್ಪೆತ್ರೆಯಲ್ಲಿ ಚಿಕೆತ್ಸೆಗೆ ವ್ಯವಸ್ಥೆ ಮಾಡುವುದಾಗಿ ಹೇಳಿ ಮಾನವೀಯ ಮೌಲ್ಯವನ್ನ ಪ್ರದರ್ಶಿಸಿದ್ದಾರೆ. ರಾಜಕೀಯದಲ್ಲಿ ಮನಸ್ತಾಪ ಅಥವಾ ಪರಸ್ಪರ ನಿಂದನೆ ಸಹಜ ಆದರೆ ಎಲ್ಲಕ್ಕಿಂತ ಮುಖ್ಯವಾದದ್ದು ಮಾನವೀಯತೆ, ಅವರ ಈ ನಾಲ್ಕು ಹಿತ ನುಡಿ, ಸ್ಪಂದನೆಯಿಂದ ದೇವೇಗೌಡರಿಗೆ ಮಹದಾನಂದವಾಗಿದೆ…
ಈ ಮಧ್ಯೆ ದೇವೇಗೌಡರು ಮತ್ತು ಅವರ ಧರ್ಮ ಪತ್ನಿಯಾದ ಶ್ರೀಮತಿ ಚೆನ್ನಮ್ಮ ಇಬ್ಬರಿಗೂ ಮತ್ತೊಮ್ಮೆ ಕೋವಿಡ್ ತಪಾಸಣೆ ಮಾಡಲಾಗಿದ್ದು ಅದರಲ್ಲಿ ಚೆನಾಮ್ಮ ಅವರಿಗೆ ಮಾತ್ರ ಕೋವಿಡ್ ಪಾಸಿಟಿವ್ ಬಂದಿದ್ದು ದೇವೇಗೌಡರಿಗೆ ಯಾವುದೇ ಸೋಂಕಿಲ್ಲವೆಂದು ಧೃಡ ಪಟ್ಟಿದೆ.

ವರದಿ: P. ಘನಶ್ಯಾಮ್ – ಬೆಂಗಳೂರು

