ಸಾಗರ: ಜನವರಿ 2 ಮತ್ತು 3 ರಂದು ಶಿವಮೊಗ್ಗದಲ್ಲಿ “ರಾಜ್ಯ ಬಿಜೆಪಿ ವಿಶೇಷ ಸಭೆ” – ಶಾಸಕರಾದ ಹೆಚ್.ಹಾಲಪ್ಪ.
ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನೆಡೆಸಿ, ಜನವರಿ 2 ಮತ್ತು 3 ರಂದು ಶಿವಮೊಗ್ಗದಲ್ಲಿ “ರಾಜ್ಯ ಬಿಜೆಪಿ ವಿಶೇಷ ಸಭೆ” ನೆಡೆಯಲಿದ್ದು, ಅಸಂಖ್ಯಾತ ಹಿಂದೂಗಳ ಒಕ್ಕೊರಲ ಧ್ವನಿಯಾಗಿದ್ದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ಮಾನ್ಯ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಭೆಗೆ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ನಾಯಕರು, ಸಚಿವರು, ಸಂಸದರು, ಶಾಸಕರು, ವಿವಿಧ ಮೋರ್ಚಾ ಅಧ್ಯಕ್ಷರು, ಪ್ರಕೋಷ್ಠಗಳ ಸಂಚಾಲಕರು, ರಾಜ್ಯ ಮಟ್ಟದ ನಾಯಕರುಗಳು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿ.
ಜನವರಿ 1 ರಿಂದ 3 ರ ವರೆಗೆ ಸಾಗರದಲ್ಲಿ ನೆಡೆಯುವ “10 ನೇ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ” ದ ಆಹ್ವಾನ ಪತ್ರಿಕೆ ಬಿಡುಗಡೆ ಗೊಳಿಸಿದರು.

ವರದಿ: ಸಿಸಿಲ್ ಸೋಮನ್
