ಸಾಗರ: ಜನಪ್ರಿಯ ಮಾಜಿ ಶಾಸಕರಾದ ಸನ್ಮಾನ್ಯ ಗೋಪಾಲಕೃಷ್ಣ ಬೇಳೂರು 55 ನೇ ಹುಟ್ಟು ಹಬ್ಬವನ್ನು ಗೋಪಾಲಕೃಷ್ಣ ಬೇಳೂರು ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾಯಿತು.

ಗೋಪಾಲಕೃಷ್ಣ ಬೇಳೂರು ಅಭಿಮಾನಿ ಬಳಗದಿಂದ ಹಮ್ಮಿಕೊಂಡ ಗೋಪಾಲಕೃಷ್ಣ ಬೇಳೂರುರವರ 55 ನೇ ಹುಟ್ಟು ಹಬ್ಬವನ್ನು ಸಾಗರದ ಗಾಂಧಿ ಮೈದಾನದಲ್ಲಿ ಮಾಡಲಾಯಿತು .

ಗೋಪಾಲಕೃಷ್ಣ ಬೇಳೂರು ಅವರ ಜನ್ಮದಿನದ ಅಂಗವಾಗಿ ವರದಹಳ್ಳಿ ಗೋಶಾಲೆಯ ಗೋವುಗಳಿಗೆ ಮೇವು ಹಂಚಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಲಕ್ಷ್ಮಿಕಾಂತ್, ಅಶೋಕ್ ಬೇಳೂರು, ವಿನಯ್ ಕುಮಾರ್ ಹಾಗೂ ಅಜೀಮ್ ಉಪಸ್ಥಿತರಿದ್ದರು.

ಕಾಂಗ್ರೆಸ್ ಯುವ ಮುಖಂಡರು ಹಾಗೂ ಸಾಗರ ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷರಾದ ಅಜೀಮ್. ಕೆ ಅವರ ವತಿಯಿಂದ ಗೋಪಾಲಕೃಷ್ಣ ಬೇಳೂರು ಹುಟ್ಟು ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ತಂಪು ಪಾನೀಯವನ್ನು ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಶ್ರೀ ಚನ್ನ ಬಸವ ಶಿವಯೋಗಿ ಮಹಾಸ್ವಾಮಿಗಳು ಮೂಲೆಗದ್ದೆ ಮಠ ದಿವ್ಯ ಸಾನಿಧ್ಯವನ್ನು ವಹಿಸಿದ್ದರು .

ಅಧ್ಯಕ್ಷತೆಯನ್ನು ಇಂದುಧರ ಗೌಡ್ರು .ಪ್ರಸ್ತಾವಿಕ ನುಡಿಗಳನ್ನು ಐ ಎನ್ ಸುರೇಶ್ ಬಾಬುರವರು ಮಾತನಾಡಿದರು ಅಥಿತಿಗಳಾಗಿ, ಸೋಮಶೇಖರ್ ಲಾವಿಗೆರೆ ತಾಲ್ಲೂಕು ಪಂಚಾಯತ ಸದಸ್ಯರು , ಅನಿತಾ ಕುಮಾರಿ ಮಹಿಳ ಅಧ್ಯಕ್ಷರು ಮಧು ಮಾಲತಿ ಸಾಗರ ನಗರ ಮಹಿಳ ಅಧ್ಯಕ್ಷರು .ಸುಮಂಗಲಾ ರಾಮಕೃಷ್ಣ ತಾಲ್ಲೂಕಿನ ಮಹಿಳಾ ಅಧ್ಯಕ್ಷರು ಮಾಸ್ತಿಕಟ್ಟೆ ಸುಬ್ಬು ಹೊಸನಗರ ಇತರರು ಭಾಗವಹಿಸಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು ಸಿರಿಜನ – ರಾಜಕೀಯ ಕ್ಷೇತ್ರ, ಅಪೂರ್ವ ಗೋಪಾಲ್ – ಯೋಗ ಕ್ಷೇತ್ರ, ಮನಸ್ವಿನಿ. ಆರ್ – ಕ್ರೀಡಾಕ್ಷೇತ್ರ ( ಚೆಸ್ ), ಪ್ರಿಯದರ್ಶಿನಿ – ಭರತನಾಟ್ಯ ಕ್ಷೇತ್ರ, ಅನಸೂಯಮ್ಮ – ಸೋಬಾನೆ ಪದ, ಸುಭಾಷ್ – ಸೈನಿಕರು, ಪ್ರಕಾಶ್ . ಬಿ – ಸೈನಿಕರು, ಗಿಲ್ಬರ್ಟ್ – ಪೊಲೀಸ್ ಇಲಾಖೆ, ಸಿಂಚನ – ಜಾನಪದ ಕ್ಷೇತ್ರ, ಭೋಜಪ್ಪ.ಬಿ – ಶಿಕ್ಷಣ ಕ್ಷೇತ್ರ, ಜಗದೀಶ್ – ಸೈನಿಕರು, ಚಿನ್ನು – ಶಿವ ಗಾರ ಅವರನ್ನು ಸನ್ಮಾನಿಸಲಾಯಿತು.


ವರದಿ: ಸಿಸಿಲ್ ಸೋಮನ್

