ತೀರ್ಥಹಳ್ಳಿ: ಜನಜಾಗೃತಿಗಾಗಿ ಕರ್ಪ್ಯೂ ಮಾಹಿತಿಗಾಗಿ ಬೈಕ್ ಏರಿದ ತೀರ್ಥಹಳ್ಳಿ ತಹಸೀಲ್ದಾರ್ ಡಾಕ್ಟರ್ ಎಸ್ .ಬಿ. ಶ್ರೀಪಾದರವರು ಮತ್ತು ಸೂರಜ್ .

ತೀರ್ಥಹಳ್ಳಿ ತಹಸೀಲ್ದಾರ್ ಡಾಕ್ಟರ್ .ಎಸ್ .ಪಿ. ಶ್ರೀಪಾದರವರು ಕಳೆದ 1ವರ್ಷಗಳಿಂದ ಕೊರೋನಾ ರೋಗದ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಹಗಲಿರುಳು ಶ್ರಮಿಸುತ್ತಿದ್ದು .ಜನಜಾಗೃತಿಗಾಗಿ ಹಗಲಿರುಳು ಜನರೊಂದಿಗೆ ಮಾಹಿತಿಗಳನ್ನು ನೀಡುತ್ತಲೇ ಇದ್ದಾರೆ .ಕೊರೋನಾ ಚಿಕಿತ್ಸಾ ಕೇಂದ್ರ. ಸಮಾನ ಮನಸ್ಕರ ಅನ್ನ ದಾಸೋಹ ಕೇಂದ್ರ. ಆಕ್ಸಿಜನ್ ವಿತರಣೆ. ಕಿಟ್ ಗಳ ವಿತರಣೆ .ಹೀಗೆ ಹತ್ತಾರು ವಿಚಾರಗಳಲ್ಲಿ ರೋಗ ನಿಯಂತ್ರಣಕ್ಕಾಗಿ, ಸಮಾಜದ ಆರೋಗ್ಯಕ್ಕಾಗಿ ಶ್ರಮಿಸುತ್ತಿದ್ದಾರೆ .ಇಂದು ಭಾನುವಾರ ತಮ್ಮ ಜೀಪ್ ಚಾಲಕ ಆರೋಗ್ಯ ಸರಿಯಿಲ್ಲವೆಂದು ರಜೆ ಹಾಕಿದ್ದು ಆದರೂ ತಹಸೀಲ್ದಾರರು ಮನೆಯಲ್ಲಿ ಕುಳಿತುಕೊಂಡಿಲ್ಲ ಬೈಕ್ ಓಡಿಸುತ್ತಾ ಪಟ್ಟಣದಲ್ಲಿ ಜನ ಜಾಗೃತಿ ಮೂಡಿಸುತ್ತಿದ್ದು ನಮ್ಮೆಲ್ಲರ ಹೆಮ್ಮ ಯಾಗಿದ್ದು .ರಜೆಯನ್ನು ಬಳಸಿಕೊಳ್ಳದೆ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಈ ರೀತಿ ಶ್ರಮಿಸುತ್ತಿರುವುದು ವಿಶೇಷದಲ್ಲಿ ವಿಶೇಷವಾಗಿ ಕಾಣಬಹುದು .ಇಂತಹ ಅಧಿಕಾರಿಗಳು ವಿರಳ ಎಂದರೆ ತಪ್ಪಾಗಲಾರದು .ಇವರೊಂದಿಗೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಡಾಕ್ಟರ್ ಆಶಾಲತಾ, ಕಸಬಾ ರಾಜಸ್ವ ನಿರೀಕ್ಷಕ ಕಟ್ಟೆ ಮಂಜುನಾಥ್, ಸೂರಜ್ ಹೀಗೆ ಅನೇಕ ಅಧಿಕಾರಿಗಳು ತಹಸೀಲ್ದಾರ್ ರೊಂದಿಗೆ ಶ್ರಮಿಸುತ್ತಿರುವುದು ವಿಶೇಷವಾಗಿದೆ ..ತಹಸೀಲ್ದಾರ್ ರವರ ಬೈಕಿನಲ್ಲಿ ಹಿಂಭಾಗದಲ್ಲಿ ಕುಳಿತವರು ಗ್ರಾಮಲೆಕ್ಕಾಧಿಕಾರಿ ಸೂರಜ್ ರಾಗಿತ್ತಾರೆ.

ವರದಿ: ಲಿಯೋ ಅರೋಜ ,ತೀರ್ಥಹಳ್ಳಿ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
