ಸಾಗರ: ಕೋವಿಡ್ 19 ರ ನಿಯಮಗಳನ್ನು ಉಲ್ಲಂಘನೆ ಮಾಡುವವರಿಗೆ ಕಡಕ್ ಎಚ್ಚರಿಕೆ ಕೊಟ್ಟಿರುವ ಸಾಗರ ನಗರ ಡಿ ವೈ ಎಸ್ ಪಿ ವಿನಾಯಕ ಶೇಟಗೆರಿ.

ಹಲವು ಬಾರಿ ಪೊಲೀಸರು ಮನೆಯಿಂದ ಹೊರಗೆ ಬಂದು ತಿರುಗಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿದ್ದರು ಎಂದಿನಂತೆ ಇಂದೂ ಕೂಡ ಸಾಗರದಲ್ಲಿ ನಿಯಮಗಳನ್ನು ಉಲ್ಲೇಖನ ಮಾಡಿ ತಿರುಗುತ್ತಿರುವ ಅವರನ್ನು ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಗರದ ಪೇಟೆ ಠಾಣೆ ಪೊಲೀಸರಿಂದ ಅನೇಕ ವಾಹನ ಸವಾರರಿಗೆ ದಂಡ ವಿಧಿಸಲಾಯಿತು.

ಸಾಗರದ ಎಸ್ಎನ್ ನಗರದಲ್ಲಿ ಕೈಬಿಟ್ಟು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಇಂದು 21 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಎಸ್ಎನ್ ನಗರದಲ್ಲಿ ಕೋರೋಣ ಸೋಂಕಿತರ ಸಂಖ್ಯೆ 46 ಕ್ಕೆ ಏರಿದೆ.

ಕಳೆದ ಬಾರಿ ವೃದ್ಧರಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ಕಾಣಿಸಿಕೊಂಡಿತ್ತು, ಆದರೆ ಎರಡನೆಯ ಬಾರಿ ಅಲೆಯಲ್ಲಿ 30 ಮತ್ತು 40 ವಯಸ್ಸು ಯುವಕರನ್ನು ಸೋಂಕು ಕಾಣಿಸಿಕೊಳ್ಳುತ್ತಿದೆ. ಎಲ್ಲಾರು ಸ್ವಯಂಪ್ರೇರಿತವಾಗಿ ಮನೆಯಿಂದ ಹೊರ ಬರದ ಹಾಗೆ ನಡೆದುಕೊಳ್ಳಲು ಕಡಕ್ ಎಚ್ಚರಿಕೆ ಸಾಗರದ ಪೇಟೆ ಠಾಣೆ ಪೊಲೀಸರು ಎಚ್ಚರಿಕೆ ನೀಡಿದ್ದರು.

ವರದಿ: ಸಿಸಿಲ್ ಸೋಮನ್

