ಕಾರ್ಗಲ್: ಕಾರ್ಗಲ್ ಚಾನಲ್ ಗೆ ಹಾರಿ ಕೋವಿಡ್ ಸೋಂಕಿತ ವ್ಯಕ್ತಿ ಆತ್ಮಹತ್ಯೆ.
ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹೆದರಿದ ವ್ಯಕ್ತಿಯೊಬ್ಬ ಚಾನಲ್ ಗೆ ಹಾರಿ ಸಾವನ್ನಪಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಬಳಿ ಶನಿವಾರ ನಡೆದಿದೆ. ಕೆಪಿಸಿ ಮಾಜಿ ಉದ್ಯೋಗಿಯಾಗಿದ್ದ ಲಿಂಗೇಗೌಡ (68) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಆರೋಗ್ಯ ಸರಿಯಿಲ್ಲದ ಕಾರಣ ಲಿಂಗೇಗೌಡ ಕೋವಿಡ್ ಟೆಸ್ಟ್ ಕೊಟ್ಟು ಬಂದಿದ್ದರು ಆದರೆ ಇಂದು ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಗಿತ್ತು , ಆದರೆ ಆಸ್ಪತ್ರೆಗೆ ದಾಖಲಾಗಲು ಹೆದರಿದ ಲಿಂಗೇಗೌಡ ಕಾರ್ಗಲ್ ನ ಚೈನಾ ಗೇಟ್ ಬಳಿ ಚಾನಲ್ ಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
