ಬೆಂಗಳೂರು: ಕಾಂಗ್ರೆಸ್ ನಾಯಕರ ಮೇಲೆ ಅಶ್ಲೀಲವಾದ ಹೇಳಿಕೆ ಕೊಟ್ಟಿರುವ ರಮೇಶ್ ಜಾರಕೀಹೊಳಿಯನ್ನು ಬಂಧಿಸಬೇಕೆಂದು ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ವಿನೂತನ ಪ್ರತಿಭಟನೆ.

ವಿಷಯ ಕೆಲಸ ಕೊಡುವ ನೆಪವೊಡ್ಡಿ ಯುವ ತಿಯನ್ನ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು, ಈಗ ಈ ವಿಚಾರವನ್ನು ಮರೆಮಾಚಲು ಕಾಂಗ್ರೆಸ್ ನಾಯಕರ ಮೇಲೆ ಅಶ್ಲೀಲವಾದ ಹೇಳಿಕೆ ಕೊಟ್ಟಿರುವ ರಮೇಶ್ ಜಾರಕೀಹೊಳಿಯನ್ನು ಬಂಧಿಸಬೇಕೆಂದು ಕಾಂಗ್ರೆಸ್ ಭವನದಿಂದ ಮೌರ್ಯವೃತ್ತದ ಗಾಂಧಿ ಪ್ರತಿಮೆ ವರೆಗೆ ಪಾದಯಾತ್ರೆ ಮೂಲಕ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕವಿಕಾ ಮಾಜಿ ಅಧ್ಯಕ್ಷರಾದ ಎಸ್ ಮನೋಹರ್ , ಜಿ ಜನಾರ್ಧನ್ ಎ ಆನಂದ್ ,ಇ ಶೇಖರ್ ಪ್ರಕಾಶ್ , ಚಂದ್ರಶೇಖರ್ , ಪುಟ್ಟುರಾಜು , ಶಶಿಭೂಷಣ್ ಉಮೇಶ್. ವೆಂಕಟೇಶ್. ಮಾಧವಹನೂರು , ಶ್ರೀಮತಿ ಶೀಲಮ್ಮ ರವರು ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ: ಸಿಸಿಲ್ ಸೋಮನ್

