ತೀರ್ಥಹಳ್ಳಿ/ ಹೊಸನಗರ :- ಕಾಂಗ್ರೆಸ್ಪಕ್ಷಕ್ಕೆ ಯಡೂರು ರಾಜಾರಾಮ್ ರಾಜಿನಾಮೆ.

ತೀರ್ಥಹಳ್ಳಿ ಕ್ಷೇತ್ರದ ಯಡೂರು ಯುವ ಮುಖಂಡ ರಾಜಾರಾಮ್ ನಿನ್ನೆ ದಿನ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ .ಪಕ್ಷದಲ್ಲಿ ಕಾರ್ಯಕರ್ತರನ್ನು ಹಾಗೂ ಎರಡನೇ ವರ್ಗದ ಮುಖಂಡರನ್ನು ಕಡೆಗಣಿಸುತ್ತಿರುವ ಬೇಸತ್ತು ರಾಜಿನಾಮೆ ನೀಡಿದರೆಂದು ತಿಳಿದು ಬಂದಿರುತ್ತದೆ.ಒಕ್ಕಲಿಗರ ಸ್ವಾಮಿಗಳಾದ ಪೂಜ್ಯ ನಂಜಾವಧೂತ ಸ್ವಾಮೀಜಿಯವರ ವಿದ್ಯಾರ್ಥಿ ಜೀವನದಲ್ಲೇ ಆಪ್ತರಾಗಿರುವ ಗುರುತಿಸಿಕೊಂಡಿರುವ ರಾಜಾರಾಮ್ ಅವರ ಮುಂದಿನ ನಡೆ ಏನೆಂಬುದು ಸದ್ಯದಲ್ಲೇ ಬಹಿರಂಗಗೊಳ್ಳಲಿದೆ .ಜನತಾದಳದಲ್ಲಿ ಈಗಾಗಲೇ .ಆರ್. ಮದನ್ ಮತ್ತು .ಆರ್. ಎಂ. ಮಂಜುನಾಥ ಗೌಡರು ಖಾಲಿ ಮಾಡಿರುವ ಜವಾಬ್ದಾರಿ ಹುದ್ದೆ ಮತ್ತು ನಾಯಕತ್ವ ಖಾಲಿಯಿದ್ದು . ಕೆಲವು ತಿಂಗಳ ಹಿಂದೆ ಮಾಜಿ ಮುಖ್ಯಮಂತ್ರಿ .ಹೆಚ್ .ಡಿ. ಕುಮಾರಸ್ವಾಮಿಯವರ ಆಪ್ತ ಬಳಗದ ಹಿರಿಯ ರಾಜಕಾರಣಿಗಳು ಮತ್ತು ನಾಯಕರು ಮಂಗಳೂರಿನಲ್ಲಿ ರಾಜಾರಾಮ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು ಎಂಬ ಮಾಹಿತಿಯೂ ನಮ್ಮ ಮಾಧ್ಯಮಕ್ಕೆ ಲಭ್ಯವಾಗಿತ್ತು .ತಾಲ್ಲೂಕಿನಲ್ಲಿ ರಾಜಕೀಯ ಮತ್ತು ರಾಜಕೀಯೇತರವಾಗಿ ಸಾವಿರಾರು ಬೆಂಬಲಿಗರನ್ನು ಹೊಂದಿರುವ ರಾಜಾರಾಮ್ ಅವರ ಮುಂದಿನ ರಾಜಕೀಯ ನಡೆ ಏನೆಂದು ಕಾದು ನೋಡುವ .

ವರದಿ: ಲಿಯೋ ಅರೋಜ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
