ಸಾಗರ: ಉಪವಾಸದ ವೃತದಲ್ಲಿದ್ದರು ಇದ್ದರೂ ಕೂಡ ಹಸಿದವರಿಗೆ ಬಿಸಿ ಬಿಸಿ ಅನ್ನ ತಣ್ಣನೆ ನೀರು ನೀಡುತ್ತಿರುವ ಸಾಗರದ ಜಮಾತ್-ಎ-ಇಸ್ಲಾಂ ಹಿಂದ್.

ಮುಸಲ್ಮಾನರ ಪವಿತ್ರ ಮಾಸ ರಂಝಾನ್ ತಿಂಗಳಲ್ಲಿ ಮುಸಲ್ಮಾನ್ ಬಾಂಧವರೂ ಉಪವಾಸ ಆಚರಣೆ ಮಾಡಿ ದಿನವಿಡೀ ಉಪವಾಸ ಇದ್ದು ಮುಸ್ಸಂಜೆ ಹೊತ್ತಿಗೆ ಉಪವಾಸ ಕೊನೆಗೊಳ್ಳುವುದು ಪ್ರತೀತಿ.. ಅಂತಹುದರಲ್ಲಿ ಇಡೀ ದೇಶವೇ ಕೋವಿಡ್-19 ಕೊರೋನ ದಿಂದ ಜನತಾ ಕರ್ಫ್ಯೂ ಲಾಕ್ ಡೌನ್ ಜಾರಿಯಾಗಿದೆ.

ಇಂತಹ ಸಮಯದಲ್ಲಿ ಸಾಗರದ “ಜಮಾತೆ ಇಸ್ಲಾಮಿ ಹಿಂದ್” ಸಂಘಟನೆಯ ಕಾರ್ಯಕರ್ತರು ಇಂದು ಕೂಡ ಉಪವಾಸ ವ್ರತ ಆಚರಣೆ ಯಲ್ಲಿಯೇ ರಾಷ್ಟ್ರೀಯ ಹೆದ್ದಾರಿ 206 ನಲ್ಲಿ ಆಗತ್ಯ ಕಾರ್ಯಗಳಿಗಾಗಿ ಓಡಾಡುವ ಜನರಿಗೆ ಮಧ್ಯಾಹ್ನ ಬಿಸಿ ಬಿಸಿ ಊಟ ಹಾಗೂ ತಣ್ಣನೆ ನೀರನ್ನು ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ “ಜಮಾತೆ ಇಸ್ಲಾಂ ಹಿಂದ್” ನ ಸದಸ್ಯರು.
ಇಡೀ ದೇಶವೇ ಕೋರೋನ ಎಂಬ ರೋಗದಿಂದ ಅಪಾಯದ ಅಂಚಿನಲ್ಲಿದೆ. ಆದ ಕಾರಣ ಸಾರ್ವಜನಿಕರು .ಸರ್ಕಾರದ ಆದೇಶದಂತೆ ನಗರಸಭೆ ಹಾಗೂ ತಾಲುಕು ಆಡಳಿತದ ನಿರ್ದೇಶನದಂತೆ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ.ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿ ಮಾಸ್ಕ್. ಸ್ಯಾನಿಟೈಸರ್.ಬಳಸಿ ಸಾಮಾಜಿಕ ಅಂತರ ಕಾಪಾಡಿ.ಎಂದು ಸಾರ್ವಜನಿಕರಲ್ಲಿ ಜಾಗೃತಿ ಅರಿವು ಮೂಡಿಸಿದರು.
ಈ ಸಂಧರ್ಭದಲ್ಲಿ ಸಾಗರದ “ಜಮಾತೆ ಇಸ್ಲಾಂ ಹಿಂದ್” ನ ಸದಸ್ಯರುಗಳು ಹಾಜರಿದ್ದರು.

ವರದಿ: ಸಿಸಿಲ್ ಸೋಮನ್

ಆಂಬುಲೆನ್ಸ್ ಸೇವೆಗಾಗಿ ಸಂಪರ್ಕಿಸಿ ಶ್ರೀ ಆಂಬುಲೆನ್ಸ್ ಗಂಗಾಧರ ಸಾಗರ :- 9663904900

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
