ಬೆಂಗಳೂರು: ಆಹಾರ ನಾಗರಿಕ ಪೂರೈಕೆ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಮಾಧ್ಯಮದವರ ವಿರುದ್ಧದ ವರ್ತನೆಯನ್ನು ಖಂಡಿಸಿ ಪ್ರತಿಭಟನೆ.

ಆಹಾರ ನಾಗರಿಕ ಪೂರೈಕೆ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಮಾಧ್ಯಮದವರ ವಿರುದ್ಧದ ವರ್ತನೆಯನ್ನು ಖಂಡಿಸಿ ಹಾಗೂ ಬಿಪಿಎಲ್ ಪಡಿತರ ಚೀಟಿಗೆ(ಟಿ.ವಿ ರೆಫ್ರಿಜಿರೇಟರ್ ದ್ವಿಚಕ್ರವಾಹನಗಳೂ ಒಂದಿದ್ದರೆ) ಆಹಾರ ಪದಾರ್ಥಗಳನ್ನು ಕಡಿತಗೊಳಿಸುವ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಹಾಗೂ ಪ್ರತಿಕೃತಿಯನ್ನು ದಹಿಸಲಾಯಿತು.ನಾಗರಿಕ ಪೂರೈಕೆ ಸಚಿವ ನಾಗಿ ಬಡವರ ಬಗ್ಗೆ ಅಧ್ಯಯನ ನಡೆಸದೆ ಕೇವಲ ಕಾಟಾಚಾರಕ್ಕಾಗಿ ಮಂತ್ರಿಗಳಾಗಿರುವಂತೆ ವರ್ತಿಸಿ ಪಡಿತರ ಚೀಟಿ ಹೊಂದಿರುವವರು ದ್ವಿಚಕ್ರ ವಾಹನ ಟಿವಿ ರೆಫ್ರಿಜಿರೇಟರ್ ಉಳ್ಳವರು ಆಗಿರಬಾರದು ವಾರ್ಷಿಕ 120 ಲಕ್ಷದ ಇಪ್ಪತ್ತು ಸಾವಿರ ಆದಾಯ ಹೊಂದಿರಬೇಕು ಅದಕ್ಕಿಂತ ಹೆಚ್ಚು ಆದಾಯ ಹೊಂದಿದ್ದರೆ ಬಿಪಿಎಲ್ ಕಾರ್ಡ್ ಅನ್ನು ಹಿಂದಕ್ಕೆ ಪಡೆಯುತ್ತೇವೆ ಎಂಬ ಬೇಜವಾಬ್ದಾರಿ ಹೇಳಿಕೆ ಅತ್ಯಂತ ಖಂಡನೀಯ ಹಾಗೂ ಮಾಧ್ಯಮದ ಸ್ನೇಹಿತರು ಕೇಳುವ ಪ್ರಶ್ನೆಗೆ ಉತ್ತರಿಸುವಷ್ಟು ಯೋಗ್ಯತೆ ಇಲ್ಲದೆ ಹೋದ ಮೇಲೆ ಮಂತ್ರಿ ಸ್ಥಾನದಲ್ಲಿ ಬಂದಿರುವ ಅರ್ಹತೆಗೆ ಸಹ ಉಮೇಶ್ ಕತ್ತಿಗೆ ಇಲ್ಲ ಇಂತಹ ಬೇಜವಾಬ್ದಾರಿ ಸಚಿವರಿಗೆ ಅವಕಾಶ ಕಲ್ಪಿಸಿಕೊಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಲೇ ಜನತೆಯ ಹಾಗೂ ಮಾಧ್ಯಮದ ಕ್ಷಮೆ ಕೋರಿ ಉಮೇಶ್ ಕತ್ತಿಯನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು ಕಾಂಗ್ರೆಸ್ ಭವನ ರೇಸ್ ಕೋರ್ಸ್ ರಸ್ತೆ ಹತ್ತಿರ. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎಸ್. ಮನೋಹರ್. ಮಾಜಿ ಮೇಯರ್ ಎಂ ರಾಮಚಂದ್ರಪ್ಪ, ಎಂ.ಎ ಸಲೀಂ – ಮಾಧ್ಯಮ ಕಾರ್ಯದರ್ಶಿ, ಬಿ ಟಿ ಶ್ರೀನಿವಾಸ್ ಮೂರ್ತಿ, ಈ ಶೇಖರ್, ಶ್ರೀಧರ್, ಆದಿತ್ಯ, ರಮೇಶ್, ಶಶಿಭೂಷಣ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ: ಸಿಸಿಲ್ ಸೋಮನ್

