ಬೆಂಗಳೂರು: ಆರ್ಯ ಈಡಿಗ ಸಮಾಜದ ನಿಗಮ ಮಂಡಳಿಯನ್ನ ಸ್ಥಾಪಿಸಬೇಕು ಮತ್ತು ಸುಮಾರು 10 ಬೇಡಿಕೆಗಳನ್ನು ಇಟ್ಟು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ – S. N. G. V. ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್

ಈ ದಿನ 11 ಗಂಟೆಯಲ್ಲಿ ಡಾಕ್ಟರ್ ಶ್ರೀ ಪ್ರಣವಾನಂದ ಸ್ವಾಮೀಜಿ ಅವರ ದಿವ್ಯಸಾನಿಧ್ಯದಲ್ಲಿ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕೂಡಲೇ ಆರ್ಯ ಈಡಿಗ ಸಮಾಜದ ನಿಗಮ ಮಂಡಳಿಯನ್ನ ಸ್ಥಾಪಿಸಬೇಕು ಮತ್ತು ಸುಮಾರು 10 ಬೇಡಿಕೆಗಳನ್ನು ಇಟ್ಟು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು ಮಾನ್ಯ ಮುಖ್ಯಮಂತ್ರಿಗಳು ಸಹ ಸಕರಾತ್ಮಕವಾಗಿ ಸ್ಪಂದಿಸಿ ಸಮುದಾಯಕ್ಕೆ ಕೂಡಲೇ ನ್ಯಾಯ ಕೊಡಿಸುವುದಾಗಿ ಭರವಸೆ ಕೊಟ್ಟರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ಮಾಜಿ ಸಚಿವರಾದ ಶ್ರೀ ಮಾಲಿಕಯ್ಯ ಗುತ್ತೇದಾರ್ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯರಾದ ಎಚ್. ಜಿ ಶ್ರೀನಾಥ್ ಧಣಿಗಳು, ಹಾಗೂ ಸಮಾಜದ ಮುಖಂಡರು ಕರ್ನಾಟಕ ಕ್ರಾಂತಿರಂಗ ಅಧ್ಯಕ್ಷರಾದ ಶ್ರೀ ಮಂಚೇಗೌಡರ್ ಮತ್ತು S. N. G. V. ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಅವರು ಹಾಗೂ ಅಡ್ವಕೇಟ್ ಶ್ರೀ ನಾಗರಾಜ್ ಗುತ್ತೇದಾರ್ ಮತ್ತು ಅನೇಕ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್- ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
