ಸಾಗರ: ಸಾಗರದ ಪೇಟೆ ಠಾಣೆ ಪೊಲೀಸರಿಂದ ಬಿಗಿ ಕಾರ್ಯಾಚರಣೆ ಅನಾವಶ್ಯಕವಾಗಿ ತಿರುಗಾಡುತ್ತಿದ್ದವರ ವಾಹನ ವಶ.

ಸಾಗರದಲ್ಲಿ ಇಂದು ನಡೆದ ಬಿಗಿ ಕಾರ್ಯಾಚರಣೆಯಲ್ಲಿ ಅನೇಕ ವಾಹನಗಳನ್ನು ವಶಪಡಿಸಲಾಗಿತ್ತು. ಲಾಕ್‍ಡೌನ್ ಶುರುವಾದಗಿನಿಂದ ಪೊಲೀಸರು ಹಗಲಿರುಳು ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸರ್ಕಾರ ಲಾಕ್‍ಡೌನ್ ನಡುವೆಯೂ ವಾಹನ ಸವಾರರು ಅನಾವಶ್ಯಕವಾಗಿ ತಿರುಗಾಡುತ್ತಿದ್ದರು. ಈ ಹಿಂದೆ ಹಲವು ಬಾರಿ ಪೊಲೀಸರು ಮನೆಯಿಂದ ಹೊರಗೆ ಬಂದು ತಿರುಗಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿದ್ದರು.

ಸಾಗರದಲ್ಲಿ ಇಂದು ನಡೆದ ಬಿಗಿ ಕಾರ್ಯಾಚರಣೆಯಲ್ಲಿ ಸಾಗರದ ಪೇಟೆ ಠಾಣೆ ಪೊಲೀಸರಿಂದ ಅನೇಕ ವಾಹನಗಳನ್ನು ವಶಪಡಿಸಲಾಗಿತ್ತು ದಂಡದ ಬಿಸಿ ಮುಟ್ಟಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸಾಗರ ಪೇಟೆ ಠಾಣೆ ಪೋಲಿಸ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್. ಸಬ್ ಇನ್ಸ್ಪೆಕ್ಟರ್ ಟಿ. ಡಿ. ಸಾಗರ್ಕರ್.ಸಿಬ್ಬಂದಿಗಳಾದ ಕಾಳನಾಯ್ಕ್. ಮಲ್ಲೇಶ್.ಜಿ. ಕೃಷ್ಣಪ್ಪ ಪ್ರವೀಣ್ ಕುಮಾರ್.ಅಬ್ದುಲ್ ಶುಕುರ್.ವಿಶ್ವನಾಥ್.ಸೈದು ನದಾಫ್ ಮೊದಲಾದವರು ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್

