ಸಾಗರ: ಸಾಗರದ ಎಲ್.ಬಿ ಕಾಲೇಜ್ ನಲ್ಲಿ ಕೋವಿಡ್-19 ಕುರಿತು ನೆಡೆದ ತಾಲ್ಲೂಕು ಹಂತದ ಅಧಿಕಾರಿಗಳ ಸಭೆ.

ಸಾಗರದ ಎಲ್.ಬಿ ಕಾಲೇಜ್ ನಲ್ಲಿ ಕೋವಿಡ್-19 ಕುರಿತು ನೆಡೆದ ತಾಲ್ಲೂಕು ಹಂತದ ಅಧಿಕಾರಿಗಳ ಸಭೆ. 2ನೇ ಹಂತದ ಲಸಿಕೆ ಪಡೆಯಲು ಗ್ರಾಮಾಂತರ ಪ್ರದೇಶದಿಂದ ಬಂದ ಅನೇಕರು ಲಸಿಕೆ ಸಿಗದೆ ವಾಪಸಾಗಿದ್ದಾರೆ, ಲಸಿಕೆ ಕೊರತೆಯಿದ್ದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಫೋನ್ ಮೂಲಕ ತಿಳಿಸಿದರೆ ಕೆಲಸ ಕಾರ್ಯಗಳನ್ನು ಬಿಟ್ಟು ಬಂದು ವಾಪಾಸಾಗುವುದು ತಪ್ಪುತ್ತದೆ.ಸಾಗರ ಉಪವಿಭಾಗಿಯ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ (ಪ್ರತ್ಯಕವಾಗಿ) ಮಾಡಿರುವುದರಿಂದ ಹೆಚ್ಚು ಸಿಬ್ಬಂದಿ ಅವಶ್ಯಕತೆಯಿದೆ ಶೀಘ್ರದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ನವರ ಅಧ್ಯಕ್ಷತೆ ವಹಿಸಿದ್ದರು. ಸಂಸದರಾದ ಬಿ.ವೈ ರಾಘವೇಂದ್ರ ರವರು, ಶಾಸಕರಾದ ಹೆಚ್. ಹಾಲಪ್ಪ ಹರತಾಳು ರವರು , ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, A.S.P, CEO, DHO, THO, ಹಾಗೂ ಚುನಾಯಿತ ಪ್ರನಿಧಿಗಳು ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್

