ಬೆಂಗಳೂರು: ಸಚಿವ ಉಮೇಶ್ ಕತ್ತಿ ಅವರ ಅಣಕು ಶವಯಾತ್ರೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಆವರಣದಲ್ಲಿ ಬುಧವಾರ ಸಂಜೆ ನೆರವೇರಿಸಲಾಯಿತು ಕಾಂಗ್ರೆಸ್ ಮುಖಂಡ ನೆರವೇರಿದರು.

ಬಡವರಿಗೆ ಎರಡು ಕೆ.ಜಿ. ಅಕ್ಕಿ ಕೊಡುವುದು ಯಾವ ನ್ಯಾಯ ಎಂದು ಕೇಳಿದ ವ್ಯಕ್ತಿಯನ್ನು ಹೋಗಿ ಸಾಯಿ ಎಂದ ಸಚಿವ ಉಮೇಶ್ ಕತ್ತಿ ಅವರ ಅಣಕು ಶವಯಾತ್ರೆ ಹಾಗೂ ಅಂತ್ಯಸಂಸ್ಕಾರವನ್ನು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಆವರಣದಲ್ಲಿ ಬುಧವಾರ ಸಂಜೆ ನೆರವೇರಿಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಎಂ.ಎ ಸಲೀಂ – ಮಾಧ್ಯಮ ಕಾರ್ಯದರ್ಶಿ, ಯುವ ಮುಖಂಡರಾದ ನಲಪಾಡ್, ಮನೋಹರ್, ಮತ್ತಿತರರು ಪಾಲ್ಗೊಂಡರು.

ವರದಿ: ಸಿಸಿಲ್ ಸೋಮನ್

