ಶಿಕಾರಿಪುರ: ಷಾಹಿ ಎಕ್ಸ್ ಪೋರ್ಟ್ ಗಾರ್ಮೆಂಟ್ಸ್ ಶಿಕಾರಿಪುರದಲ್ಲಿ ಸುಮಾರು 4000 ಅಧಿಕ ಯುವಕ ಯುವತಿಯರಿಗೆ ಉದ್ಯೋಗಾವಕಾಶ.
ಶಿಕಾರಿಪುರದಲ್ಲಿ ಸುಮಾರು 4000 ಅಧಿಕ ಯುವಕ ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಷಾಹಿ ಎಕ್ಸ್ ಪೋರ್ಟ್ ಗಾರ್ಮೆಂಟ್ಸ್ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಉದ್ಘಾಟನೆಗೊಳ್ಳಲಿದ್ದು ಇಂದು ಸಾಂಕೇತಿಕವಾಗಿ ಒಂದು ಘಟಕವನ್ನು ಗಣಪತಿ ಪೂಜೆಯನ್ನು ಮಾಡುವ ಮೂಲಕ ಸಂಸದರಾದ ಬಿ ವೈ ರಾಘವೇಂದ್ರ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಷಾಹಿ ಮುಖ್ಯಸ್ಥರಾದ ಶ್ರೀ ಅನೂಬ್, ಶ್ರೀ ಆನಂದ ಪದ್ಮನಾಭ, ಶ್ರೀ ಶ್ರೀನಿವಾಸ್, ಜವಳಿ ಕಮೀಷನರ್ ಶ್ರೀ ಯು.ಪಿ ಸಿಂಗ್ ಮುಂತಾದವರು ಉಪಸ್ಥಿತಿಯಿದ್ದರು.
ವರದಿ: ಗೌತಮ್ ಕೆ.ಎಸ್