ಸಾಗರ: ಶಿವಗಿರಿ ಮತ್ತು ಬ್ರಹ್ಮಶ್ರೀ ನಾರಯಣಗುರುಗಳನ್ನು ಒಳಗೊಂಡ ಸ್ತಭ್ದ ಚಿತ್ರ ಪ್ರದರ್ಶಿಸಬಹುದಿತ್ತು – ಸಿಸಿಲ್ ಸೋಮನ್.
ಬ್ರಹ್ಮಶ್ರೀ ನಾರಯಣ ಗುರುಗಳ ವೇಷಧಾರಿಯನ್ನು ಶಿಲುಬೆಗೆ ಏರಿಸಿ ಮೆರವಣಿಗೆ ಮಾಡಿದ ಕಮ್ಯುನಿಸ್ಟ್‌ರಿಗೆ ನಿಜವಾಗಿಯೂ ಬ್ರಹ್ಮಶ್ರೀ ನಾರಯಣ ಗುರುಗಳ ಬಗ್ಗೆ ಶ್ರದ್ಧೆ ಇದ್ದಿದ್ದೆ ಆದರೆ ತನ್ನ ಮೊದಲ ಟ್ಯಾಬ್ಲೊ ಮಾದರಿಯನ್ನು ಪ್ರದರ್ಶಿಸುವಾಗಲೆ – ಶಿವಗಿರಿ ಮತ್ತು ಬ್ರಹ್ಮಶ್ರೀ ನಾರಯಣಗುರುಗಳನ್ನು ಒಳಗೊಂಡ ಸ್ತಭ್ದ ಚಿತ್ರ ಪ್ರದರ್ಶಿಸಬಹುದಿತ್ತು .
ತಾನು ಮೊದಲು ವಿನ್ಯಾಸ ಮಾಡಿದ್ದು ಜಟಾಯು ಪರಾ ಎನ್ನುವ ಟೂರಿಸಂ ಮತ್ತು ಮಹಿಳಾ ಸಶಕ್ತಿರಣದ ಥೀಮ್‌ನ್ನು .. ಆಕರ್ಷಕವಲ್ಲದ – 56 ಟ್ಯಾಬ್ಲೊಗಳಲ್ಲಿ ವಿನ್ಯಾಸ ಮತ್ತು ಸಂದೇಶದ ದೃಷ್ಟಿಯಿಂದ ಅತ್ಯಂತ ಕಡಿಮೆ ಅಂಕಗಳಿಸಬಲ್ಲ ಟ್ಯಾಬ್ಲೊ ಆಗಿತ್ತು ಕೇರಳದ್ದು ಎನ್ನುವುದನ್ನು ಸಾಮಾನ್ಯನು ಗ್ರಹಿಸಬಲ್ಲ .
ಆದರು ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಕಲಾ-ಸಂಗೀತ ಕ್ಷೇತ್ರದ ಸಾಧಕರನ್ನು ಒಳಗೊಂಡ ಟ್ಯಾಬ್ಲೊ ಆಯ್ಕ ಸಮಿತಿ ಸದಸ್ಯರು ಕೇರಳಕ್ಕೆ ಮತ್ತೊಂದು ಅವಕಾಶವನ್ನು ನೀಡಿದರು , ಈ ವರ್ಷ 75ರ ಸ್ವಾತಂತ್ರ್ಯದ ಅಮೃತಮಹೋತ್ಸವದ ಥೀಮ್ ಕೇಂದ್ರಿತವೆ ಟ್ಯಾಬ್ಲೊ ಇರುವುದರಿಂದ ಟೂರಿಸಂ ಬದಲು ಜಟಾಯು ಪರಾದ ಎದುರು ಶಂಕರಾಚಾರ್ಯರ ಪ್ರತಿಮೆಯನ್ನು ಇಟ್ಟು ಭಕ್ತಿ ಆಂದೋಲನದ ಮೂಲಕ ಭಾರತವನ್ನು ಜೋಡಿಸಿದ ಶಂಕರಾಚಾರ್ಯರು ಹುಟ್ಟಿದ ನೆಲ ಕೇರಳ ಎಂಬ ಥೀಮ್ ಇದ್ರೆ ಚೆನ್ನಾಗಿರಬಹುದು ಎಂಬ ಆಯ್ಕ ಸಮಿತಿಯ ಸದಸ್ಯರಾದ ಹಿರಿಯ ಕಲಾವಿದರು ತಮ್ಮ ಅಭಿಪ್ರಾಯವನ್ನು ಕೇರಳದ ಅಧಿಕಾರಿಗಳು ಮತ್ತು ಕಲಾವಿದರ ಎದುರುಗಡೆ ಇಟ್ಟಿದೆ .
ಹೇಗೂ ತನ್ನ ಟ್ಯಾಬ್ಲೊ ಪರೇಡ್‌ನಿಂದ ಹೊರ ಬೀಳುತ್ತದೆ ಅನ್ನುವುದು ಕೇರಳದ ರಾಜಕೀಯ ಕಲಾವಿದರಿಗೆ ಗೊತ್ತಾಗಿದೆ ತಕ್ಷಣ ಹೊಸದೊಂದು ವಿವಾದ ಹುಟ್ಟುಹಾಕಲು ತನ್ನ ಮೂರನೇ ರಿವ್ಯೂನಲ್ಲಿ ಮೊದಲಿಗಿಂತಲು ಕೆಟ್ಟದಾದ ವಿನ್ಯಾಸ ಇರುವ ಜಟಾಯುವಿನ ಮುಂದೆ ಬಣ್ಣದ ಹೊಂದಾಣಿಕೆಯನ್ನು ಗಮನಿಸದೆ ಬ್ರಹ್ಮ ಶ್ರೀ ನಾರಯಣ ಗುರುಗಳನ್ನು ಪ್ರತಿಮೆಯನ್ನು ಸೇರಿಸಿದರು .
ಇಲ್ಲಿ ಆಯ್ಕೆ ಆಗಬೇಕೆಂಬ ಉತ್ಸಾಹಕ್ಕಿಂತ ತಿರಸ್ಕೃತಗೊಳ್ಳಬೇಕೆಂಬ ಉದಾಸೀನತೆಯೆ ಹೆಚ್ಚು ಕೆಲಸ ಮಾಡಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ .. ಅಂದರೆ ಇದನ್ನು ಒಂದು ವಿವಾದವಾಗಿ ಮಾಡಿ ಅದರಿಂದ ಒಂದು ಸಮುದಾಯವನ್ನು ಬಿಜೆಪಿಯಿಂದ ದೂರ ಮಾಡಬೇಕೆಂಬ ಕಮ್ಯುನಿಸ್ಟ್ ಹುನ್ನಾರ ಇದರ ಹಿಂದಿದೆ .
ಇನ್ನು ಪಶ್ಚಿಮ ಬಂಗಾಳದ ನೇತಾಜಿಯನ್ನು ಹೊತ್ತ ಟ್ಯಾಬ್ಲೊ ಹೊರಬಿದ್ದಿರುವುದು CPWD ಯು ನೇತಾಜಿ ಥೀಮ್ ಇರುವ ಟ್ಯಾಬ್ಲೊ ಪ್ರದರ್ಶಿಸುತ್ತಿರುವ ಕಾರಣಕ್ಕೆ ..
ಶಂಕರಾಚಾರ್ಯರು -ಬ್ರಹ್ಮಶ್ರೀ ನಾರಯಣಗುರುಗಳು
ಶಿವಾಜಿ – ಇಮ್ಮಡಿ ಪುಲಿಕೇಶಿ
ಸಾರ್ವಕರ್ – ಸಂಗೊಳ್ಳಿ ರಾಯಣ್ಣರ ಹೆಸರಿನಲ್ಲಿ ರಾಜ್ಯ – ರಾಜ್ಯಗಳ ಮಧ್ಯೆ ..ಜಾತಿ ಮತ ಪಂಥ ಭಾಷೆಗಳ ಮಧ್ಯೆ ಜಗಳ ತಂದಿಡುವವರಿಗೆ ಒಂದು ಸತ್ಯ ಗೊತ್ತಿರಲಿ … ಈ ಎಲ್ಲಾ ಮಹಾತ್ಮರು ತಮ್ಮ ತನು ಮನ ಪ್ರಾಣವನ್ನು ಅರ್ಪಿಸಿರುವುದು
” ಭಾರತವೆಂಬ ನಾಡ ಗುಡಿಯ ಕಟ್ಟಲು ” ವಿದೇಶಿ ಷಡ್ಯಂತ್ರಗಳ ಎಂಜಲ ಆಸೆಗೆ ಬಲಿಯಾಗಿ ನೀವೂ ಇಂದು ಇದೆ ಮಹಾತ್ಮರ ಹೆಸರಿನಲ್ಲಿ ನೀವೂ ಒಡೆಯ ಹೊರಟಿರುವುದು “ಭಾರತವೆಂಬ ನಾಡಗುಡಿಯನು”
ವರದಿ: ಸಿಸಿಲ್ ಸೋಮನ್
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್- ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.