ಸಾಗರ: ಲಾಕ್ ಡೌನ್ ಕಾರಣ ಹಸಿದವರ ನೆರವಿಗೆ ನಿಂತ “ಜಮಾಅತ್ ಎ ಇಸ್ಲಾಂ ಹಿಂದ್..”

ಕೋವಿಡ್- 19 ಕೋರೋನ ದೇಶದೆಲ್ಲೆಡೆ ಹುಚ್ಚು ಕುದುರೆಯ ರೀತಿ ಶರವೇಗದಲ್ಲಿ ಹರಡುತ್ತಿದ್ದು ಇದರ (ಚೈನ್ ಲಿಂಕ್) ಕಳಚುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್ಡೌನ್ ಜನತಾ ಕರ್ಫ್ಯೂ ಈಗಾಗಲೇ ರಾಜ್ಯಾದ್ಯಂತ ಹೇರಿದ್ದು. ಇದರ ಪರಿಣಾಮ ಲಾರಿ ಚಾಲಕರಿಗೆ ನಿರ್ಗತಿಕರಿಗೆ ಬಡವರಿಗೆ ಕೂಲಿಕಾರ್ಮಿಕರಿಗೆ ಬಹಳ ತೊಂದರೆ ಉಂಟಾಗಿ ಕಷ್ಟದ ಕಾಲದಲ್ಲಿರುವ ಇಂತಹ ಸಮಯದಲ್ಲಿ ಸಾಗರದ ಜಮಾತ್-ಎ-ಇಸ್ಲಾಂ ಹಿಂದ್ ಸಂಘಟನೆಯು ಹಸಿವಿನಿಂದ ಬರುವ ಪರವೂರಿನ ಲಾರಿ ಚಾಲಕರಿಗೆ ಹಾಗೂ ಆಸ್ಪತ್ರೆಯ ರೋಗಿಗಳು ಸಂಚರಿಸುವವರಿಗೆ ಜಮಾತ್-ಎ-ಇಸ್ಲಾಂ ಹಿಂದ್ಸ ತತ ಮೂರು ದಿನಗಳಿಂದ ಸಾಗರದ ಶಿವಮೊಗ್ಗ ರಸ್ತೆಯ ಪ್ರವೇಶದ್ವಾರದ ಬಳಿ ತ್ಯಾಗರ್ತಿ ಕ್ರಾಸ್ ಬಳಿ ಮಧ್ಯಾಹ್ನ ಅಗತ್ಯ ವಸ್ತುಗಳನ್ನು ಹೇರಿಕೊಂಡು ಹೋಗುವ ಲಾರಿ ಚಾಲಕರಿಗೆ ಹಾಗೂ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ವಾಹನ ಚಾಲಕರಿಗೆ ಮಧ್ಯಾಹ್ನದ ಊಟ ಹಾಗೂ ಒಂದು ಬಾಟಲಿ ನೀರು ನೀಡಿ ಹಸಿದವರ ನೆರವಿಗೆ ನಿಂತಿದೆ.

ಜಮಾತೆ ಇಸ್ಲಾಂ ಹಿಂದ್ ನ ಪ್ರಮುಖರಾದ ಜನಾಬ್. ಶಫಿವುಲ್ಲಾ ಪತ್ರಿಕೆಯೊಂದಿಗೆ ಮಾತನಾಡಿದ ಮುಖಂಡರಾದ ರವರು ಇದು ಬರಿ ಮೂರು ದಿನದ ಕೆಲಸವಲ್ಲ ಲಾಕ್ ಡೌನ್ ಎಲ್ಲಿಯವರೆಗೆ ಸರ್ಕಾರ ವಿಧಿಸುತ್ತದೆಯೋ.. ಅಲ್ಲಿಯವರೆಗೆ ನಾವು ನಿರಂತರ ಹಸಿದವರಿಗೆ ಊಟ ನೀಡುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದರು ಈ ಸಂದರ್ಭದಲ್ಲಿ. ಜಮಾತೆ ಇಸ್ಲಾಂ ಹಿಂದ್ ನ ಮುಖಂಡರುಗಳಾದ ಶಫಿವುಲ್ಲಾ. ಅಮೀರ್ ಖಾನ್. ಗಫಾರ್. ಅನ್ವರ್ ಉಲ್ ಹಖ್ಖ್. ಸಿರಾಜ್. ಶಾಹಿದ್. ಸಿಗ್ಬತ್ ಉಲ್ಲಾ ಮೊದಲಾದವರು ಇದ್ದರು.

ವರದಿ: ಸಿಸಿಲ್ ಸೋಮನ್

