ಸಾಗರ: ಲಾಕ್ಡೌನ್ ; ಜಿಲ್ಲಾಡಳಿತದ ಆದೇಶ ಪಾಲಿಸಬೇಕೋ, ಸಾಗರ ಶಾಸಕ ಹಾಲಪ್ಪರದ್ದು ಪಾಲಿಸಬೇಕೋ-ಬಿಜೆಪಿ ಆಡಳಿತ ಗೊಂದಲದ ಗೂಡು -ಮಾಜಿ ಕಾಂಗ್ರೇಸ್ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ್.
ಜಿಲ್ಲಾಧಿಕಾರಿ ಮತ್ತು ಸಚಿವ ಈಶ್ವರಪ್ಪರವರು ಶಿವಮೊಗ್ಗ ಜಿಲ್ಲಾದ್ಯಂತ ಲಾಕ್ಡೌನ್ ಘೋಷಣೆ ಮಾಡಿದ್ದಾರೆ. ಅಲ್ಲಿ ಕೆಲವೊಂದು ಸಡಿಲಿಕೆ ಇದೆ. ಆ ಸಡಿಲಿಕೆ ಸಾಗರದಲ್ಲಿ ಏಕೆ ಇಲ್ಲ. ಲಾಕ್ಡೌನ್ ಘೋಷಿಸಲು ಶಾಸಕರಿಗೆ ಅಧಿಕಾರ ಇದೆಯೇ, ಈಗ ಲಾಕ್ಡೌನ್ ಮುಂದುವರಿಕೆ ಮಾಡಲು ಯಾರದ್ದೂ ಅಡ್ಡಿ ಇಲ್ಲ. ಆದರೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಜನರಿಗೆ ಮುಟ್ಟಿಸಿ ಲಾಕ್ಡೌನ್ ಮುಂದುವರೆಸಬೇಕು ಇಲ್ಲದಿದ್ದಲ್ಲಿ ದಿನಾಲು ಕನಿಷ್ಟ ಪಕ್ಷ ಮೂರು ಗಂಟೆಯ ಸಡಲಿಕೆಯನ್ನು ಅಗತ್ಯ ವಸ್ತುಗಳನ್ನು ಕೊಳ್ಳಲು ನೀಡಬೆಕು ಈ ಕೂಡಲೇ ಇದನ್ನು ಜಾರಿ ಮಾಡಬೇಕು ಎಂದು ಮಾಜಿ ಕಾಂಗ್ರೇಸ್ ಜಿಲ್ಲಾ ಅಧ್ಯಕ್ಷ ಮತ್ತು ಮಾಜಿ ಪುರಸಭಾ ಅಧ್ಯಕ್ಣ ತೀ.ನ. ಶ್ರೀನಿವಾಸ್ ಹೇಳಿದ್ದಾರೆ.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು ಅವರು ದಿನಸಿಕಿಟ್’ಗಳನ್ನು ಮೂವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನೀಡುವುದಾಗಿ ಹೇಳಿಕೆ ನೀಡಿದ ನಗರಸಭಾ ಅಧ್ಯಕ್ಷರು ಅವರ ಮನೆಯಿಂದ ತಂದು ಹಣ ಕೊಡುತ್ತಾರೆಯೇ, ನಗರಸಭೆಯ ವೆಚ್ಚದಲ್ಲಿ ಹಣ ಕೊಡಲಾಗುತ್ತದೆ. ಅದಕ್ಕೆ ಸಮಯವೇಕೆ ಲಾಕ್ಡೌನ್ ಇರುವ ಈ ಸಮಯದಲ್ಲಿ ಬಡವರು ಕಣ್ಣು ಬಿಡುತ್ತಿದ್ದಾರೆ. ಅವರ ಕಷ್ಡ ಪರಿಹರಿಸಲು ಕೂಡಲೇ ಆಹಾರದ ಕಿಟ್ ನೀಡಬೇಕು ಎಂದು ಹೇಳಿದರು.
ಶಾಸಕ ಹಾಲಪ್ಪ ಕೇವಲ ಹೇಳಿಕೆ ನೀಡುವಲ್ಲಿ, ಮೀಟಿಂಗ್ ಮಾಡುವಲ್ಲಿ ಕಾಲ ಕಳೆಯುವುದಲ್ಲ ಬದಲಿಗೆ ಜನರ ಜೀವನಕ್ಕೆ ಈ ಸಮಯದಲ್ಲಿ ಸಹಾಯ ಮಾಡಲು ಮುಂದಾಗಬೇಕು. ಆರೋಗ್ಯ ಎಲ್ಲರಿಗೂ ಬೇಕು. ಯಾರಿಗಾದರೂ ಜೀವಕ್ಕೆ ತೊಂದರೆ ಆದರೆ ಅಂಬುಲೆನ್ಸ್’ಗಳು ಬೇಲಿ ಹಾರಿ ಬರಬೇಕೆ, ಕಂಡಕಂಡಲ್ಲಿ ಬೇವ್ಯಯಲಿ ನಿರ್ಮಿಸಿ ತುರ್ತಾಗಿ ಬರುವ ವಾಹನಗಳು ಮತ್ತು ಜನರಿಗೆ ತೊಂದರೆ ಆಗುತ್ತಿದೆ ಇದನ್ನು ಈ ಕೂಡಲೇ ತೆರವು ಮಾಡಿ ಜನರು ಮಾತ್ರ ಬರದಂತೆ ತಡೆಯಬೇಕು ಎಂದು ಹೇಳಿದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
