ಬೆಂಗಳೂರು, ಸೆ.29- ಸೋಂಕು ನಿಯಂತ್ರಣಕ್ಕಾಗಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಪಾಲಿಕೆ ಮಾಸ್ಕ್ ಧರಿಸದೆ ಬೇಜವಾಬ್ದಾರಿ ಪ್ರದರ್ಶಿಸಿದರೆ ಬೀಳಲಿದೆ ಜೇಬಿಗೆ ಕತ್ತರಿ. ಈಗಾಗಲೇ ನಗರದಲ್ಲಿ ಮಾಸ್ಕ್ ಧರಿಸದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿರುವವರಿಗೆ ದಂಡ ವಿಸಲಾಗುತ್ತಿದೆ. ಹಾಲಿ ಇರುವ ದಂಡದ ಮೊತ್ತವನ್ನು 1000ರೂ.ಗೆ ಏರಿಸಲಾಗುತ್ತಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಈಗಾಗಲೇ ನಗರದಾದ್ಯಂತ 240ಕ್ಕೂ ಹೆಚ್ಚು ಮಾರ್ಷಲ್ಗಳು ಕಾರ್ಯನಿರ್ವಹಿಸುತ್ತಿದ್ದು, ಮಾಸ್ಕ್ ಧರಿಸದೆ ಸಂಚರಿಸುತ್ತಿರುವವರ ವಿರುದ್ಧ ದಂಡ ವಿಸುತ್ತಿದ್ದಾರೆ.
ಈಗ ಹಾಲಿ 200ರೂ. ದಂಡವಿದ್ದು, ಅದರ ಪ್ರಮಾಣವನ್ನು 1000ರೂ.ಗೆ ಹೆಚ್ಚಿಸಲಾಗುತ್ತದೆ. 240 ಮಾರ್ಷಲ್ಗಳ ಜತೆ ಇನ್ನೂ 120 ಮಾರ್ಷಲ್ಗಳ ನೇಮಕಕ್ಕೆ ತೀರ್ಮಾನಿಸಲಾಗಿದೆ ಎಂದರು.
ಒಟ್ಟಿನಲ್ಲಿ ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಹದ್ದಿನ ಕಣ್ಣಿಟ್ಟಿದ್ದು, ನೂತನ ಪರಿಷ್ಕøತ ದಂಡ ವಿಸುವ ಕುರಿತು ಶೀಘ್ರದಲ್ಲೇ ಆದೇಶ ಹೊರಬೀಳಲಿದೆ.
ಮಾರ್ಷಲ್ಗಳ ಜತೆ ಪೊಲೀಸರು ಸಹ ದಂಡ ವಿಸಬಹುದಾಗಿದ್ದು, ಇವರಿಗೆ ದಂಡ ವಿಸುವ ಡಿವೈಸ್ಗಳನ್ನು ನೀಡಲಾಗುವುದು. ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ರಸ್ತೆಗೆ ಬಂದರೆ ಜೇಬಿಗೆ ಕತ್ತರಿ ಬೀಳುವುದಂತೂ ಗ್ಯಾರಂಟಿ. ಮಾಸ್ಕ್ ಧರಿಸಿ ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.
