ದೊಡ್ಡಾಲಹಳ್ಳಿ: ಬಸವರಾಜ ಬೊಮ್ಮಾಯಿ ಅವರೇ ನಿಮಗೆ ನಮ್ಮನ್ನು ಮತ್ತೆ ಜೈಲಲ್ಲಿ ನೋಡುವ ಆಸೆ ಇದೆ, ನಮ್ಮನ್ನು ಜೈಲಿಗೆ ಹಾಕಿ, ಹಾಲು ಕುಡಿದು ನಿಮ್ಮ ಹೊಟ್ಟೆ ತಣ್ಣಗೆ ಮಾಡಿಕೊಳ್ಳಿ – ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.

ಬಸವರಾಜ ಬೊಮ್ಮಾಯಿ ಅವರೇ ನಿಮಗೆ ನಮ್ಮನ್ನು ಮತ್ತೆ ಜೈಲಲ್ಲಿ ನೋಡುವ ಆಸೆ ಇದೆ, ನಮ್ಮನ್ನು ಜೈಲಿಗೆ ಹಾಕಿ, ಹಾಲು ಕುಡಿದು ನಿಮ್ಮ ಹೊಟ್ಟೆ ತಣ್ಣಗೆ ಮಾಡಿಕೊಳ್ಳಿ.
ಈ ನೀರಿನ ವಿಚಾರದಲ್ಲಿ ತಮಿಳುನಾಡಿನವರು ರಾಜಕಾರಣಕ್ಕೆ ಕ್ಯಾತೆ ತೆಗೆಯುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ನಮ್ಮ ಹೋರಾಟಕ್ಕೆ ಕ್ಯಾತೆ ತೆಗೆಯುತ್ತಿರುವ ಈ ಬಿಜೆಪಿ ಹಾಗೂ ಜೆಡಿಎಸ್ ನವರು ದೇಶದ್ರೋಹಿಗಳು ಹಾಗೂ ರಾಜ್ಯ ದ್ರೋಹಿಗಳಲ್ಲವೇ ಎಂದು ತಾವು ತೀರ್ಮಾನ ಮಾಡಬೇಕು.
ನಾನು ಈ ಗಡ್ಡ ಬಿಟ್ಟಿದ್ದು, ತಿಹಾರ್ ಜೈಲಲ್ಲಿ. ಈ ಗಡ್ಡ ತೆಗೆಯಬೇಕು ಎಂದರೆ ನೀವೇ ಮುಕ್ತಿ ಕೊಡಿಸಬೇಕು. ನಾನು ಚುನಾವಣೆಯಲ್ಲಿ ಬಂದು ಮತ ಕೇಳಲು ಸಮಯವಿಲ್ಲ, ಇಲ್ಲಿರುವ ಪ್ರತಿಯೊಬ್ಬರು ನೀವೇ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್.
ಸರ್ಕಾರದವರು ಇಂದು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ನನ್ನನ್ನು ಮತ್ತೆ ಜೈಲಿಗೆ ಹಾಕಲು ಷಡ್ಯಂತ್ರ ಮಾಡುತ್ತಿದೆ. ಆದರೆ ನಿಮ್ಮ ಮಗ ಹೆದರುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಕೋವಿಡ್ ಬಂದು ಇಲ್ಲಿ ಯಾರಾದರೂ ಸತ್ತಿದ್ದಾರಾ? ನಮ್ಮ ಕಾರ್ಯಕ್ರಮ ನಿಲ್ಲಿಸಲು ಕಾನೂನು ತಂದಿದ್ದೀರಿ. ನನ್ನ ಹಾಗೂ ಸುರೇಶ್ ಜತೆಗೆ ಮಠಾಧೀಶರು, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ 100 ಶಾಸಕರಿದ್ದರು. ಮೊದಲು ನೀವು ನಮ್ಮನ್ನೆಲ್ಲ ಬಂಧಿಸಿ, ಪ್ರಕರಣ ದಾಖಲಿಸಿ ಎಂದು ನಾನಿಂದು ಗೃಹ ಸಚಿವ ಸಚಿವರಿಗೆ ಹೇಳಿದ್ದೇನೆ.
ಇಲ್ಲಿ ಯಾರ್ಯಾರು ಬಂದಿದ್ದಾರೆ ಎಂಬ ವಿಡಿಯೋ ಕಳುಹಿಸಿಕೊಡುತ್ತೇನೆ. ಎಲ್ಲರ ಮೇಲೂ ಪ್ರಕರಣ ದಾಖಲಿಸಿ. ಎಲ್ಲರನ್ನು ಜೈಲಿಗೆ ಹಾಕಿ.
ಸಂಗಮದಿಂದ ಇಲ್ಲಿಯವರೆಗೂ ನಡೆದಿದ್ದು, ಮುಂದಿನ 10 ದಿನಗಳಲ್ಲಿ ಇನ್ನು 150 ಕಿ.ಮೀ ನಡೆಯಬೇಕು. ನೀವು ನನಗೆ ಹಾಗೂ ಡಿ.ಕೆ. ಸುರೇಶ್ ಗೆ ಕೊಟ್ಟ ಶಕ್ತಿಯಿಂದ ಎಲ್ಲ ನಾಯಕರ ಜತೆ ಸೇರಿ, ರಾಜ್ಯದ ರೈತರ ರಕ್ಷಣೆ ಹಾಗೂ ಕುಡಿಯುವ ನೀರಿನ ಸೌಕರ್ಯಕ್ಕೆ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ.
ನೀವು ನನ್ನನ್ನು ಜಿಲ್ಲಾ ಪಂಚಾಯಿತಿಗೆ ಆಯ್ಕೆ ಮಾಡಿ, ಶಾಸಕನನ್ನಾಗಿ ಮಾಡಿದ ನಂತರ ನಿಮ್ಮ ಊರು, ಹೋಬಳಿ, ತಾಲೂಕು ಹೇಗೆ ಬದಲಾಗಿದೆ ಎಂಬುದಕ್ಕೆ ನಿಮ್ಮ ಕಣ್ಣುಗಳೇ ಸಾಕ್ಷಿ.
ನನ್ನನ್ನು ಸಾಕಿದ್ದೀರಿ, ಸುರೇಶ್ ನನ್ನು ಸಂಸತ್ತಿಗೆ ಕಳುಹಿಸಿದ್ದೀರಿ. ನಾವು, ನಮ್ಮೆಲ್ಲ ನಾಯಕರು ಒಂದು ಸಂಕಲ್ಪ ಮಾಡಿ, ರಾಜ್ಯಕ್ಕೆ ನಮ್ಮ ಕೈಲಾದ ಕೊಡುಗೆ ಕೊಡಲು ಈ ಹೋರಾಟಕ್ಕೆ ಕೈ ಹಾಕಿದ್ದೇವೆ.
ನಾವು ಇಂತಹ ಹೋರಾಟ, ಸಭೆ ಮಾಡುವಂತಿಲ್ಲ ಎಂದು ಸರ್ಕಾರ ಕರ್ಫ್ಯೂ ಜಾರಿ ಮಾಡಿದೆ. 5 ಜನರ ಮೇಲೆ ಇರುವಂತಿಲ್ಲ, ಯಾರೂ ಅಂಗಡಿ ಮುಂಗಟ್ಟು ತೆರೆಯುವಂತಿಲ್ಲ.
ನಾನು ಬಹಿರಂಗ ಸಭೆ ಇಟ್ಟುಕೊಂಡಿಲ್ಲ. ನಮ್ಮ ತಾಯಂದಿರು ಕಾಯ್ದು ಕೂತಿದ್ದಾರೆ. ಹೀಗಾಗಿ ಮಾತನಾಡುತ್ತಿದ್ದೇನೆ. ನಮ್ಮ ತಾಯಂದಿರು ಇವತ್ತಿನ ರೀತಿ ಯಾವತ್ತೂ ಸಂಭ್ರಮಿಸಿಲ್ಲ.
ನಿಮಗೆ ಮೇಕೆದಾಟು ನೀರು ಅಗತ್ಯವಿಲ್ಲ, ಶಿಂಷಾ ಹಾಗೂ ಅರ್ಕಾವತಿ ನದಿಯಿಂದ ನೀರು ತಂದು ಕೆರೆ ತುಂಬಿಸಿದ್ದೇವೆ. 12 ಅಡಿ ರಸ್ತೆ 50 ಅಡಿ ರಸ್ತೆಯಾಗಿವೆ. ನಿಮ್ಮ ಆಸ್ತಿ ಬೆಲೆ ಹೆಚ್ಚಿಸಿದ್ದೇವೆ.
ನಾನು ಇದುವರೆಗೂ ಯಾರಿಗಾದರೂ ಮೋಸ ಮಾಡಿದ್ದೀನಾ? ಕೆಡಕು ಮಾಡಿದ್ದೀನಾ? ನನ್ನನ್ನು ಜೈಲಿಗೆ ಕಳುಹಿಸಿದಾಗ ನೀವು ನೀಡಿದ ಬೆಂಬಲ, ಮಾಡಿದ ಹೋರಾಟ ಮರೆಯಲು ಸಾಧ್ಯವಿಲ್ಲ.
ನನಗೆ ಹಾಲು ಕೊಟ್ಟಿದ್ದೀರಿ, ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ನಾನು ನಿಮ್ಮ ಬಳಿ ಕೇಳಿಕೊಳ್ಳುತ್ತೇನೆ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
