ಶಿರಾ ಉಪಚುನಾವಣೆ ಕಣ ರಂಗೇರಿದ್ದು, ಬಿಜೆಪಿ ಬೂತ್ ಮಟ್ಟದ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ರಾಜ್ಯಾದ್ಯಂತ ಕೆರೆ ಕಟ್ಟೆಗಳಲ್ಲಿ ನೀರು. ಆದರೆ, ಬೇರೆಯವರು ರಾಜ್ಯದ ಸಿಎಂ ಆದರೆ ಬರೀ ಕಣ್ಣಿರು ಎಂದು ಪರೋಕ್ಷವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ವ್ಯಂಗ್ಯವಾಡಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜನರು ಚುನಾವಣೆಯಲ್ಲಿ ಮತಗಳ ರೂಪದಲ್ಲಿ ಹಾಲು ಅಥವಾ ವಿಷವನ್ನು ನೀಡುವ ಬಗ್ಗೆ ಮಾತನಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹಾ ಸಿರಾ ಉಪ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಾಲು ಕೊಡಬೇಡಿ.. ವಿಷ ನೀಡಬೇಡಿ.. ಕೊರೊನಾ ಸಮಯವಾಗಿರುವುದರಿಂದ ಕಷಾಯ ಕೊಟ್ಟು ಕಳುಹಿಸಿ ಎಂದು ವ್ಯಂಗ್ಯವಾಡಿದ್ದಾರೆ.
