ದೆಹಲಿ: ದೇಶದ ಜನರ ಹೋರಾಟಕ್ಕೆ ಇದು ಐತಿಹಾಸಿಕ ದಿನ – ಡಿ.ಕೆ.ಶಿವಕುಮಾರ್.

ಕೃಷಿ ತಿದ್ದುಪಡಿ ಕಾಯ್ದೆಗಳ ವಾಪಸ್ ಸಂಬಂಧ ಬಿಜೆಪಿ ಮೋಸ ಮಾಡಲಿದೆ ಎಂದು ಜನರಲ್ಲಿ ಭಯವಿದೆ. ಸದ್ಯದಲ್ಲೇ ಸಂಸತ್ ಅಧಿವೇಶನ ನಡೆಯಲಿದ್ದು ಅವರು ಈ ಬಗ್ಗೆ ನಿರ್ಣಯ ಮಂಡಿಸಲಿ. ಮುಖ್ಯಮಂತ್ರಿ ಇದ್ದಾಗ ಮೋದಿ ಅವರು ಏನು ಹೇಳಿದ್ದಾರೋ ಅದನ್ನು ಮಾಡಲಿ. ಅವರು ನುಡಿದಂತೆ ನಡೆಯಲಿ ಎಂದು ಜನ ಹೇಳುತ್ತಿದ್ದಾರೆ.

ಉತ್ತರ ಪ್ರದೇಶ, ಪಂಜಾಬ್ ಚುನಾವಣೆ ಸಮೀಪಿಸುತ್ತಿದ್ದು, ಮತದಾರರ ತೀರ್ಪು ಶಕ್ತಿ, ಅಭಿಪ್ರಾಯದ ಮುಂದೆ ಯಾರೂ ನಿಲ್ಲಲು ಸಾಧ್ಯವಿಲ್ಲ. ಅದರಿಂದ ಎಚ್ಛೆತ್ತುಕೊಂಡು ಕೇಂದ್ರ ಈಗ ಕೃಷಿ ಕರಾಳ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದಿದೆ. ಅವರಿಗೆ ಈಗಲಾದರೂ ಜ್ಞಾನೋದಯವಾಗಿರುವುದಕ್ಕೆ ಧನ್ಯವಾದಗಳು.
ಈ ಹೋರಾಟ ಬಿಜೆಪಿಯದ್ದಲ್ಲ, ಹೀಗಾಗಿ ಈ ಗೆಲುವು ಬಿಜೆಪಿಯದ್ದಲ್ಲ. ಈ ದೇಶದ ರೈತರು, ಕಾಂಗ್ರೆಸ್ ಪಕ್ಷದ ಗೆಲುವು. ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿ ಬಂದ ನಂತರ ರಾಹುಲ್ ಗಾಂಧಿ ಅವರು ರೈತರನ್ನು ಬೆಂಬಲಿಸುವಂತೆ ಕರೆ ಕೊಟ್ಟರು. ಜತೆಗೆ ಎಷ್ಟೇ ಸಮಯವಾಗಲಿ ಸರ್ಕಾರ ಕೇಂದ್ರ ಸರ್ಕಾರ ಈ ಮೂರು ಕೃಷಿ ಕರಾಳ ಕಾಯ್ದೆಗಳನ್ನು ಹಿಂಪಡೆಯದೆ ಬೇರೆ ದಾರಿಯಿಲ್ಲ ಎಂದು ರಾಹುಲ್ ಗಾಂಧಿ ಅವರು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದರು.
ಬಿಜೆಪಿಗೆ ವಿಧಿ ಇಲ್ಲದೆ ಈಗ ಹಿಂಪಡೆದಿದೆ.
ನಾವೆಲ್ಲ ಇದೇ 21ರಿಂದ ತುಮಕೂರಿನಿಂದ ಪಾದಯಾತ್ರೆ ಮಾಡಿ ಜನರ ಬಳಿ ಹೋಗುತ್ತೇವೆ. ನಮ್ಮ ಮಾತು, ಧ್ವನಿ, ಆಚಾರ- ವಿಚಾರವನ್ನು ಜನ ಒಪ್ಪಿದ್ದಾರೆ. ನಾವು ಜನರ ಪರವಾಗಿ ಇದ್ದೇವೆ ಎಂಬುದಕ್ಕೆ ಇದೆ ಸಾಕ್ಷಿ. ಈ ಹೋರಾಟದಲ್ಲಿ ಸತ್ತಿರುವ ಸುಮಾರು 700 ರೈತರನ್ನು ದೇಶದ ಹುತಾತ್ಮರು ಎಂದು ಘೋಷಿಸಿ, ಅವರಿಗೆ ಸಿಗಬೇಕಾದ ಗೌರವ, ಅವರ ಕುಟುಂಬದವರಿಗೆ ಪರಿಹಾರ, ಸೌಲಭ್ಯ ಒದಗಿಸಬೇಕು, ಆಯಾ ರಾಜ್ಯದಲ್ಲಿ ಅವರ ಕುಟುಂಬದವರಿಗೆ 5 ಎಕರೆ ಭೂಮಿ ಕೊಟ್ಟು, ಕುಟುಂಬ ಸದಸ್ಯರು ಬದುಕಲು ಅವಕಾಶ ಮಾಡಿಕೊಡಬೇಕು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.

okbet 2022
26/01/2023 at 11:22
Highly recommended did this. Very interesting information. Thanks for sharing!
okbet ph