ತೀರ್ಥಹಳ್ಳಿ: ತೀರ್ಥಹಳ್ಳಿ ಕಟ್ಟೆಹಕ್ಕಲು ಭವಾನಿ ಕೊಲೆ ಪ್ರಕರಣ ಆರೋಪಿಗಳ ಬಂಧನ.

ದಿನಾಂಕಃ-09-06-2021 ರಂದು ಬೆಳಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟೆಹಕ್ಲು ಗ್ರಾಮದ ವಾಸಿ ಶ್ರೀಮತಿ ಭವಾನಿ, 85 ವರ್ಷ ರವರಿಗೆ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಸೇರಿ ಮಾರಣಾಂತಿಕ ಹಲ್ಲೆ ನಡೆಸಿ 10 ಗ್ರಾಂ ತೂಕದ ಬಂಗಾರದ ಸರ ಹಾಗೂ ರೂ 3,000/- ನಗದು ಹಣವನ್ನು ದೋಚಿಕೊಂಡು ಓಡಿ ಹೋಗಿದ್ದು, ಭವಾನಿ ರವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಮೃತೆಯ ಮಗ ರಘುರಾಮ ರವರು ನೀಡಿದ ದೂರಿನ ಮೇರೆಗೆ ಕಲಂ 302, 397 ಐಪಿಸಿ ರಿತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಪಿಐ ತೀರ್ಥಹಳ್ಳಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ದಿನಾಂಕಃ- 15-06-2021 ರಂದು ಆರೋಪಿಗಳಾದ 1)ನಿತಿನ್ ಎಸ್ ಶೆಟ್ಟಿ, 32 ವರ್ಷ, ಗೋಪಾಳ ಮುಖ್ಯ ರಸ್ತೆ, ಶಿವಮೊಗ್ಗ, 2) ಶಿವು ಸೋಮಯ್ಯ, 36 ವರ್ಷ, ಹುಣಸೂರು ಮುಖ್ಯ ರಸ್ತೆ, ಮೈಸೂರು ನಗರ ರವರುಗಳನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಪ್ರಕರಣಕ್ಕೆ ಸಂಬಂಧಿಸಿದ ರೂ 1,000/- ನಗದು ಹಣ, 01 ರೋಲ್ಡ್ ಗೋಲ್ಡ್ ಸರ, ಕೃತ್ಯಕ್ಕೆ ಉಪಯೋಗಿಸಿದ 01 ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಸದರಿ ಆರೋಪಿಗಳು ಕಾಪು ಪೊಲೀಸ್ ಠಾಣೆಯಲ್ಲಿ 01 ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣ ಮತ್ತು ಉಡುಪಿ ಪೊಲೀಸ್ ಠಾಣೆಯಲ್ಲಿ 01 ಹಾಗೂ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ 01 ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ.ಎಂದು ತಿಳಿದುಬಂದಿದ್ದು ಈ ಪ್ರಕರಣವನ್ನು ಜಿಲ್ಲಾ ರಕ್ಷಣಾಧಿಕಾರಿಗಳಾದ ಲಕ್ಷ್ಮಿ ಪ್ರಸಾದ್ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳ ಶೇಖರ್ ಡಿ ಚಿಕ್ಕಣ್ಣನವರ ಮತ್ತು ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರ ರವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್ ರವರು ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆ ಹಚ್ಚುತ್ತಾರೆ .ಸಬ್ ಇನ್ ಸ್ಪೆಕ್ಟರ್ ಯಲ್ಲಪ್ಪ ಹಿರೇಗಣ್ಣನವರ ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ಆರ್ ಸುಷ್ಮಾ ಪೊಲೀಸ್ ಸಿಬ್ಬಂದಿಗಳಾದ ಕುಮಾರ್ ,ಪುನೀತ್, ರಮೇಶ್ ನಾಯ್ಕ್ ,ಜನಾರ್ದನ್, ಸುಧಾಕರ್, ರವಿ ,ಆಸಿಫ್, ದೀಪಕ್ ,ಅವಿನಾಶ್ ,ಸುರೇಶ್ ನಾಯ್ಕ್, ಮತ್ತು ಚಾಲಕರಾದ ಅವಿನಾಶ್ ರವರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು .

ವರದಿ: ಲಿಯೋ ಆರೋಜ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
