ಹೊಸನಗರ : ಜನ್ಮ ಕೊಟ್ಟ ತಾಯಿಯನ್ನೆ ಅಸ್ತಿಗಾಗಿ ,ಹಣಕ್ಕಾಗಿ ಹಲ್ಲೆ ಮಾಡಿ,ಕೊಲೆ ಪ್ರಯತ್ನ.

ಜನ್ಮ ಕೊಟ್ಟ ತಾಯಿಯನ್ನೆ ಅಸ್ತಿಗಾಗಿ ,ಹಣಕ್ಕಾಗಿ ಹಲ್ಲೆ ಮಾಡಿ,ಕೊಲೆ ಪ್ರಯತ್ನ, ಗ್ರಾಮಸ್ಥರ ಆಕ್ರೋಶ.ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು .
ರಿಪ್ಪನ್ ಪೇಟೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ ಮತ್ತು ಆಕೆಯ ಪತಿ ಅಣ್ಣಪ್ಪ ಸೇರಿಕೊಂಡು ಸುಮಾರು 63 ವಯಸ್ಸಿನ ತನ್ನ ತಾಯಿಯ ವೃದ್ಧಾಪ್ಯ ಹಣ ನೀಡುವಂತೆ ಹಲ್ಲೆ ನಡೆಸಿ..ಕೊಲೆ ಮಾಡುಲು ಪ್ರಯತ್ನಿಸಿದ ಕುರಿತು ರಿಪ್ಪನ್ ಪೇಟೆ ಪೋಲಿಸ್ ರಾಣೆಯಲ್ಲಿ ಗಂಭೀರ ಗಾಯಗೊಂಡ ಇಂದ್ರಮ್ಮ ದೂರು ನೀಡಿದ್ದಾರೆ ಎನ್ನಲಾಗಿದೆ.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ ಜನಪ್ರತಿನಿದಿಯಾಗಿ ಜನಸೇವೆ ಮಾಡಿ ಇತರರಿಗೆ ಮಾದರಿಯಾಗಬೇಕಿದ್ದ ಬಿಟ್ಟು ತನ್ನ ಗಂಡನಿಗೆ ಪ್ರೆಚೋದಿಸಿ..ಅತ್ತೆಯನ್ನೆ ಕೊಲ್ಲು ವ ಸಂಚು ನಡೆಸಿದ್ದಾರೆ ಎಂದು ಇಂದ್ರಮ್ಮ ಪೋಲಿಸ್ ರ ಸಮ್ಮೂಕದಲ್ಲಿ ಅಳಲು ತೊಡಿಕೊಂಡಿದ್ದಾರೆ.
ಹಣಕ್ಕಾಗಿ ಹೆತ್ತ ತಾಯಿಯನ್ನು ಕತ್ತು ಹಿಸುಕಿ ಹಲ್ಲೆ ನಡೆಸಿದ ಅಣ್ಣಪ್ಪ ಹಾಗೂ ಮಹಾಲಕ್ಷ್ಮಿ ಮೇಲೆ ಕೊಲೆ ಪ್ರಯತ್ನ ಪ್ರಕರಣ ದಾಖಲಾಗುವಂತೆ ಜಿಲ್ಲಾ ಮಹಿಳಾ ರಕ್ಷಣ ವೇದಿಕೆ ಪೋಲಿಸ್ ಇಲಾಖೆಯನ್ನು ಒತ್ತಾಯಿಸಿದೆ.
ಮಹಾಲಕ್ಷ್ಮಿ ತನ್ನ ಉಪಾಧ್ಯಕ್ಷೆ, ಹಾಗೂ ಸದಸ್ಯ ತ್ವಕ್ಕೆ ರಾಜಿನಾಮೆ ನೀಡ ಬೇಕು ಎಂದು ಎ.ಬಿ.ಸಿ ಟ್ರಸ್ಟ್ ಒತ್ತಾಯಿಸಿದೆ.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ತಾಯಿಯನ್ನು ಕೊಲೆಮಾಡಲು ಸಂಚು ರೂಪಿಸಿದ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ, ಗಂಡ ಅಣ್ಣಪ್ಪ ಇವರನ್ನು ತಕ್ಷಣ ಬಂಧಿಸ ಬೇಕು ಎಂದು ಗ್ರಾಮಸ್ಥರ ಜಿಲ್ಲಾ ರಕ್ಷಣ ಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ೦ದು ಎಂದು ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಮತ್ತು ಸೊಸೆಯಂದಿರಿಂದ ಪೋಷಕರ ಮೇಲೆ ಈ ರೀತಿ ಹಲ್ಲೆ ನಡೆಸಿರುವುದು ಮತ್ತು ಅವರನ್ನು ನೋಡಿಕೊಳ್ಳದೇ ಇರುವ ಬಗ್ಗೆ ನ್ಯಾಯಾಲಯಗಳು ಸಹ ಗಂಭೀರವಾಗಿ ಪರಿಗಣಿಸಿ ಆಸ್ತಿಯಲ್ಲಿ ಹಕ್ಕು ಗಳು ಇಲ್ಲ ಮತ್ತು ಮಕ್ಕಳ ವೃತ್ತಿ ಹಾಗೂ ಆದಾಯದಲ್ಲಿ ತಂದೆತಾಯಿಯ ನೋಡಿಕೊಳ್ಳಬೇಕೆಂಬ ಕಠಿಣ ಆದೇಶವನ್ನು ನೀಡಿದ ನಿರ್ದೇಶಗಳು ನಮ್ಮ ಮುಂದಿವೆ. ಮತ್ತು ಪೋಷಕರನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಇಲ್ಲ ಸಹ ಎಂಬ ಆದೇಶಗಳು ಹೊರ ಬರ ತೊಡಗಿವೆ .ಇಂತಹದರಲ್ಲಿ ಗ್ರಾಮ ಪಂಚಾಯಿತಿ ಯಲ್ಲಿ ಜನಸೇವೆ ಮಾಡುತ್ತೇನೆ ಎಂದು ಮತದಾರರಿಗೆ ನಂಬಿಸಿ ಚುನಾವಣೆಯಲ್ಲಿ ಗೆದ್ದು ಸದಸ್ಯರಾಗಿ ಉಪಾಧ್ಯಕ್ಷರಾದಂತಹ ಇಂತಹ ಕ್ರಿಮಿನಲ್ ಮನೋಭಾವದ ಗ್ರಾಮ ಪಂಚಾಯಿತಿ ಸದಸ್ಯರಿಂದ ಮತ್ತು ಉಪಾಧ್ಯಕ್ಷೆ ಯವರನ್ನು ಸದಸ್ಯತ್ವದಿಂದ ವಜಾ ಗೊಳಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

ವರದಿ: ಲಿಯೋ ಆರೋಜ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
