ಮಾನವೀಯತೆ ಮೆರೆದ ಬೆಂಗಳೂರು ಪೊಲೀಸರು, ಆಗಸ್ಟ್ ತಿಂಗಳ 16 ರಂದು ಮಾರತ್ ಹಳ್ಳಿ ಬಳಿ ಅಪಘಾತ ಸಂಭವಿಸಿ ಸಂಜಯ್ ಎಂಬಾತನ ತಲೆಗೆ ಗಂಭೀರ ಗಾಯಳಾದವು.ತಲೆಗೆ ತೀವ್ರ ಪೆಟ್ಟಾಗಿ ಸಂಜಯ್ ಅದಾಗಲೇ ಕೋಮಾ ಹಂತ ತಲುಪಿದ್ದ. ಕೋಮಾಗೆ ಹೋಗಿದ್ದರಿಂದ ಸಂಜಯ್ಗೆ ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗಿತ್ತು. ಕೂಡಲೇ ಸ್ಥಳೀಯ ಆಸ್ಪತ್ರೆಯಿಂದ ನಿಮ್ಹಾನ್ಸ್ಗೆ ಕರೆತಂದ ಪೊಲೀಸರು, ಸಂಜಯ್ ತಲೆಯಲ್ಲಿ ಹೆಪ್ಪುಗಟ್ಟಿದ್ದ ರಕ್ತದ ಗಡ್ಡೆಯನ್ನ ಶಸ್ತ್ರಚಿಕಿತ್ಸೆ ಮೂಲಕ ತೆಗೆದರು. ಆದರೆ, ಸಂಜಯ್ ಮಾತ್ರ ಕೋಮಾದಿಂದ ಎದ್ದಿರಲಿಲ್ಲ. ಕೊನೆಗೆ ಸಂಜಯ್ನ ಹಿನ್ನೆಲೆ ಕಲೆಹಾಕಿದ ಪೊಲೀಸರಿಗೆ ಸಂಜಯ್ ಮಹಾರಾಷ್ಟ್ರ ಮೂಲದವವೆಂಬುದು ತಿಳಿದು ಬಂದಿತು.
ಈ ವೇಳೆ, 15ದಿನಗಳ ಕಾಲ ಸಂಜಯ್ ಮಾತ್ರ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲೇ ದಿನದೂಡಿದ್ದ. ಸಂಜಯ್ ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಯ ಬೆಡ್ನಲ್ಲಿ ಪವಡಿಸಿದ್ದರೆ, ಇತ್ತ ಅವನಿಗಾಗಿ ಬಂದವರ್ಯಾರೂ ಇಲ್ಲ. ಆಗೆಲ್ಲಾ ಜೊತೆಯಾಗಿದ್ದು ರಾತ್ರಿ ಹಗಲೆನ್ನದೆ ಸಂಜಯ್ನ ಆರೈಕೆ ಮಾಡಿದ್ದು ಪೊಲೀಸರೇ. ಆಸ್ಪತ್ರೆಯಲ್ಲಿ ಒಂದು ತಿಂಗಳವರೆಗೂ ಪಾಳಿಯಂತೆ ಕಾನ್ಸ್ಟೆಬಲ್ಗಳಾದ ಕಾಶಪ್ಪ, ಚೀರಂಜೀವಿ ಹಾಗೂ ಶ್ರೀಕಾಂತ್ ಮತ್ತು ಇತರ ಸಿಬ್ಬಂದಿ ಸಂಜಯ್ ಗುಣಮುಖನಾಗುವವರೆಗೂ ಕಾದು ಉಪಚರಿಸಿದ್ದಾರೆ. ಸಂಪೂರ್ಣ ಗುಣಮುಖನಾದ ಮೇಲೆಯೇ ಸಂಜಯ್ ಅವರನ್ನು ಪೊಲೀಸರು ಮಹಾರಾಷ್ಟ್ರಕ್ಕೆ ಹೋಗಲು ಟಿಕೆಟ್ಗೆ ಹಣ ಕೊಟ್ಟು ಕಳುಹಿಸಿದ್ದಾರೆ.
