ಸಾಗರ: ಕೊರೋನಾ ಹರಡುವಿಕೆ ನಿಯಂತ್ರಣಕ್ಕಾಗಿ 2 ವಾರಗಳ ಕಟ್ಟುನಿಟ್ಟಿನ ನಿರ್ಬಂಧ ಪ್ರಾರಂಭ, ಅನಾವಶ್ಯಕವಾಗಿ ತಿರುಗಾಡುತ್ತಿದ್ದವರಿಗೆ ಸಾಗರ ಪೇಟೆ ಠಾಣೆ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ.

ಆತ್ಮೀಯ ನಾಗರಿಕ ಬಂಧುಗಳೇ, ಕೊರೋನಾ ಹರಡುವಿಕೆ ನಿಯಂತ್ರಣಕ್ಕಾಗಿ 2 ವಾರಗಳ ಕಟ್ಟುನಿಟ್ಟಿನ ನಿರ್ಬಂಧ ಪ್ರಾರಂಭವಾಗಿದೆ. ಎಲ್ಲರಲ್ಲೂ ನನ್ನ ಕಳಕಳಿಯ ಮನವಿಯೆಂದರೆ, ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ, ಸರ್ಕಾರದೊಂದಿಗೆ ಸಹಕರಿಸಿ, ಮನೆಯಲ್ಲೇ ಇರಿ, ತುರ್ತು ಪರಿಸ್ಥಿತಿ ಇದ್ದಲ್ಲಿ ಮಾತ್ರ ಹೊರಗೆ ಬನ್ನಿ. ನಾವೆಲ್ಲರೂ ಒಂದಾಗಿ ಕೊರೋನಾ ಮಣಿಸೋಣ.

ಲಾಕ್‍ಡೌನ್ ಶುರುವಾದಗಿನಿಂದ ಪೊಲೀಸರು ಹಗಲಿರುಳು ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಲಾಕ್‍ಡೌನ್ ನಡುವೆಯೂ ವಾಹನ ಸವಾರರು ಅನಾವಶ್ಯಕವಾಗಿ ತಿರುಗಾಡುತ್ತಿದ್ದರು. ಈ ಹಿಂದೆ ಹಲವು ಬಾರಿ ಪೊಲೀಸರು ಮನೆಯಿಂದ ಹೊರಗೆ ಬಂದು ತಿರುಗಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿದ್ದರು.

ಈ ಕಾರ್ಯಾಚರಣೆಯಲ್ಲಿ ಸಾಗರ ಪೇಟೆ ಠಾಣೆ ಪೋಲಿಸ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್. ಸಬ್ ಇನ್ಸ್ಪೆಕ್ಟರ್ ಟಿ. ಡಿ. ಸಾಗರ್ಕರ್.ಸಿಬ್ಬಂದಿಗಳಾದ ಕಾಳನಾಯ್ಕ್. ಮಲ್ಲೇಶ್.ಜಿ. ಕೃಷ್ಣಪ್ಪ ಪ್ರವೀಣ್ ಕುಮಾರ್.ಅಬ್ದುಲ್ ಶುಕುರ್.ವಿಶ್ವನಾಥ್.ಸೈದು ನದಾಫ್ ಮೊದಲಾದವರು ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್

