ಹಾನಗಲ್: ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ದಾರುಲ್ ಹುದಾ ಕ್ಯಾಂಪಸ್ ನಲ್ಲಿ ಸನ್ಮಾನ – ಮುನೀರ್ ಅಹ್ಮದ್.
ಇತ್ತೀಚೆಗೆ ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿದ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಹಾವೇರಿ ಜಿಲ್ಲೆಯ ಹಾನಗಲ್ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ದಾರುಲ್ ಹುದಾ ಹಾನಗಲ್ ಕ್ಯಾಂಪಸ್ ಮ್ಯಾನೇಜ್ಮೆಂಟ್ ಹಾಗೂ ಶಿಕ್ಷಕ ವೃಂದದ ವತಿಯಿಂದ ಕ್ಯಾಂಪಸ್ ಆಡಿಟೋರಿಯಂನಲ್ಲಿ ಸನ್ಮಾನಿಸಲಾಯಿತು. ದಾರುಲ್ ಹುದಾ ಮ್ಯಾನೇಜಿಂಗ್ ಕಮಿಟಿ ಮೆಂಬರ್ ಎಚ್.ಕೆ.ಎಚ್ ಹಾಜಿ ಮುನೀರ್ ಅಹ್ಮದ್ ಹಾಗೂ ಮುಹಮ್ಮದ್ ಶರೀಫ್ ಮಂಗಳೂರು ಹರೇಕಳ ಹಾಜಬ್ಬರವರಿಗೆ ಶಾಲು ಹೊದಿಸಿ, ಫಲಪುಷ್ಪವನ್ನಿತ್ತು, ಸ್ಮರಣಿಕೆ ನೀಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ವಿದ್ಯಾರ್ಧಿಗಳನ್ನು ಉದ್ದೇಶಿಸಿ ಮಾತನಾಡಿದ ಹರೇಕಳ ಹಾಜಬ್ಬರವರು ವಿದ್ಯೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ಹೇಳಿದರು.
ತನ್ನ ಊರಿನ ವಿದ್ಯಾರ್ಥಿಗಳಿಗೆ ಕಲಿಯಲು ಶಾಲೆಯನ್ನು ನಿರ್ಮಿಸಲು ತಾನು ಪಟ್ಟ ಶ್ರಮದ ಬಗ್ಗೆ ವಿವರಿಸಿದ ಹಾಜಬ್ಬರು ಮುಂದಕ್ಕೆ ಅದನ್ನು ಪಿ.ಯು ಕಾಲೇಜಾಗಿ ಮಾಡುವ ತನ್ನ ಕನಸನ್ನು ವಿದ್ಯಾರ್ಥಿಗಳ ಜೊತೆ ಹಂಚಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರೇನರ್ ರಫೀಕ್ ಸರ್ ಮಂಗಳೂರು ವಿದ್ಯಾರ್ಥಿಗಳು ತಮ್ಮ ಸಮಯವನ್ನು ಸದಾ ವಿದ್ಯಾರ್ಜನೆ ಮಾಡಲು ಉಪಯೋಗಿಸಿ ಪ್ರತಿಯೊಬ್ಬರೂ ಹರೇಕಳ ಹಾಜಬ್ಬರಂತೆ ಮಾರ್ಗದರ್ಶಿಗಳಾಗುವಂತೆ ಹಾರೈಸಿದರು. ಐ.ಎ.ಎಸ್, ಐ.ಪಿ.ಎಸ್ ಗಳಂತಹ ಭಾರತದ ಉನ್ನತ ಹುದ್ದೆಗಳನ್ನು ಮುಂದೆ ಅಲಂಕರಿಸಲು ಬೇಕಾದ ಶ್ರಮಗಳನ್ನು ಈಗಾಗಲೇ ಮಾಡುವಂತೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಬಲರಾಂ ಗುರ್ಲುಹೊಸೂರು ಹಾನಗಲ್, ಎಂ.ಎಂ ಮುಲ್ಲಾ ಹಾನಗಲ್, ನಜೀರ್ ನೀಲಂಜಿ ಹಾನಗಲ್, ಶರೀಫ್ ಗುತ್ತೇವಾಲೇ, ಸಂಶೀರ್ ಹುಲ್ಲತ್ತಿ, ಮೌಲಾನಾ ಸಾದಿಕ್ ಮಖಬೂಲಿ ಹಾನಗಲ್, ಮೌಲಾನಾ ಝಬೀಹುಲ್ಲಾ ಹಜ್ರತ್ ಅಕ್ಕಿಆಲೂರು, ಇಬ್ರಾಹೀಂ ಖಲೀಲ್ ಮಾಲಿಕಿ ಕಾಸರಗೋಡು, ಅಸದುಲ್ಲಾಹ್ ಹುದವಿ ಮುಂಬೈ, ಸಾಲಿಹ್ ಹುದವಿ ಚೆಮ್ಮಾಡ್, ಆಶಿಕ್ ಹುದವಿ, ಜುನೈದ್ ಹುದವಿ, ಮುಈನುದ್ದೀನ್ ಹುದವಿ, ಮುಬಶ್ಶಿರ್ ಹುದವಿ, ಗೌಸ್ ಸರ್ ಹೀರೇಕೇರೂರು ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಶಫೀಕ್ ಅಹ್ಮದ್ ಹುದವಿ ತುಂಬೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರೂಫಸರ್ ಸೈಫ್ ಹುದವಿ ಭೀವಂಡಿ ಸ್ವಾಗತಿಸಿದರು ಮತ್ತು ಉಪ ಪ್ರಾಂಶುಪಾಲರಾದ ಇಬ್ರಾಹೀಂ ಹುದವಿ ಶಿವಮೊಗ್ಗ ವಂದಿಸಿದರು.
ವರದಿ: ಸಿಸಿಲ್ ಸೋಮನ್
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.